ದಾವಣಗೆರೆ, ಡಿ 2: ಟಿವಿ ವಾಹಿನಿಯೊಂದರಲ್ಲಿ ಪ್ರಕಟವಾಗುತ್ತಿರುವ ಧಾರಾವಾಹಿಯಲ್ಲಿ ಬರುವ ದೃಶ್ಯವೊಂದನ್ನು ವೀಕ್ಷಿಸಿ 7 ವರ್ಷದ ಬಾಲಕಿ ಸಾವನ್ನಪ್ಪಿರುವ ಹಿನ್ನೆಲೆ ನೊಂದ ಪೋಷಕರು ಟಿವಿಯನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಂದಿನಿ ಸೀರಿಯಲ್ ನೋಡುತ್ತಾ ಅದೇ ರೀತಿ ನಟನೆ ಮಾಡಲು ಹೋಗಿ 7 ವರ್ಷದ ಬಾಲಕಿ ಪ್ರಾರ್ಥನಾ ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ಹಿನ್ನಲೆಯಲ್ಲಿ ಕಳೆದ 11 ನೇ ತಾರೀಖಿನಂದು ನಡೆದ ಘಟನೆಯಿಂದ ಅಘಾತ ಉಂಟಾಗಿರುವ ಮಗುವಿನ ಪೋಷಕರು ಟಿವಿಯ ಮೇಲೆ ತಮ್ಮ ಆಕ್ರೋಶ ತೋರಿಸಿದ್ದಾರೆ.
ಸದಾ ನಗು ನಗುತ್ತಾ ಮನೆ ತುಂಬಾ ಓಡಾಡುತ್ತಿದ್ದ ನಮ್ಮ ಮಗು ಈಗ ಇನ್ನೆಂದೂ ಬಾರದ ಲೋಕಕ್ಕೆ ಹೋಗಿದೆ. ಇದಕ್ಕೆ ಕಾರಣ ಈ ಟಿವಿ, ಇದರಿಂದಲೇ ನಮ್ಮ ಮಗು ಸಾವನ್ನಪ್ಪಿದೆ ಎಂದು ಪ್ರಾರ್ಥನಾ ತಂದೆ ಮಂಜುನಾಥ್ ಕಲ್ಲಿನಿಂದ ಟಿವಿಯನ್ನು ಒಡೆದು ಹಾಕಿದ್ದಾರೆ.