ಕಾಸರಗೋಡು, ಡಿ.23(DaijiworldNews/AK): ಮೊಗ್ರಾಲ್ ಪೇರಾಲ್ ಪೆಟ್ಟೋಡಿ ಮೂಳೆಯ ಅಬ್ದುಲ್ ಸಲಾಂ (22) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿ ಆರೋಪಿಗಳಿಗೆ ಜೀವಾವಧಿ ಸಜೆ ವಿಧಿಸಿ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಕುಂಬಳೆ ಬದರಿಯಾ ನಗರದ ಸಿದ್ದಿಕ್ (46 ) ಉಮ್ಮರ್ ಫಾರೂಕ್ (36) , ಪೆರುವಾಡಿನ ಶಹೀರ್ (36) , ಪೇರಾಲ್ ನ ನಿಯಾಜ್ (28) , ಪೆರುವಾಡ್ ಕೋಟೆಯ ಲತೀಫ್ (42), ಆರಿಕ್ಕಾಡಿ ಬಂಬ್ರಾಣದ ಹರೀಶ್ (36) ಶಿಕ್ಷೆಗೊಳಗಾದವರು.
ಪ್ರಕರಣದಲ್ಲಿ ಅರುಣ್ ಕುಮಾರ್ ಮತ್ತು ಖಲೀಲ್ ಖುಲಾಸೆಗೊಂಡಿದ್ದಾರೆ. 2017 ರ ಏಪ್ರಿಲ್ 30 ರಂದು ಅಬ್ದುಲ್ ಸಲಾಂ ರನ್ನು ಮೊಗಾರ್ಲ್ ಮಾಲಿಯಂಗರ ಕೋಟೆ ಸಮೀಪ ಕೊಲೆಗೈಯ್ಯಲಾಗಿತ್ತು.
ಸಲಾಂ ಜೊತೆಗಿದ್ದ ನೌಶಾದ್ ನನ್ನು ಇರಿದು ಗಾಯಗೊಳಿಸಲಾಗಿತ್ತು. ಅಬ್ದುಲ್ ಸಲಾಂ ನೇತೃತ್ವದ ತಂಡವು ಆರೋಪಿಯಾಗಿರುವ ಸಿದ್ದಿಕ್ ನ ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿತ್ತು. ಇದಕ್ಕೆ ಪ್ರತಿಕಾರವಾಗಿ ಈ ಕೃತ್ಯ ನಡೆಸಿರುವುದಾಗಿ ತನಿಖೆಯಿಂದ ತಿಳಿದು ಬಂದಿತ್ತು.