ಕಾಸರಗೋಡು, ಡಿ.23(DaijiworldNews/AA): ಕಯ್ಯಾರು ಕ್ರಿಸ್ತರಾಜ ದೇವಾಲಯದ ವತಿಯಿಂದ ಧರ್ಮಗುರು ಫಾ. ವಿಶಾಲ್ ಮೋನಿಸ್ ನೇತೃತ್ವದಲ್ಲಿ ಕ್ರಿಸ್ಮಸ್ ರೋಡ್ ಶೋ ಮತ್ತು ಟ್ಯಾಬ್ಲೊ ವಿವಿಧ ಕೇಂದ್ರಗಳಲ್ಲಿ ಸಂಚರಿಸಿ ಯೇಸು ಕ್ರಿಸ್ತರ ಜನನದ ಸಂದೇಶವನ್ನು ನೀಡಲಾಯಿತು.
ಪೈವಳಿಕೆಯಿಂದ ಆರಂಭಗೊಂಡ ರೋಡ್ ಶೋ ಮತ್ತು ಟ್ಯಾಬ್ಲೋಗೆ ವಿವಿಧೆಡೆಗಳಲ್ಲಿ ಸ್ವಾಗತ ಲಭಿಸಿತು. ಪೈವಳಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡಂಬೈಲ್ ಜಿಯುಎಲ್ಪಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಹಾಗೂ ರಾಜ್ಯ ಪ್ರಶಸ್ತಿ ಶಿಕ್ಷಕಿ ರಾಮಾ ಬಾಯಿ ಎಂ. ಮತ್ತು ಸಮಾಜ ಸೇವಕ ಅಜೀಜ್ ಕಳಾಯಿ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದರು.
ಜೋಡುಕಲ್ನಲ್ಲಿ ಸಹಕಾರಿ ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ರಾಜಾರಾಮ್ ಬಲ್ಲಾಳ್ ಚಿಪ್ಪಾರ್, ಪಚ್ಚ೦ಬಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯ ಮಜೀದ್ ಪಚ್ಚ೦ಬಳ ಹಾಗೂ ಕಯ್ಯಾರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಕ್ಕೆಜಾಲ್ ವಾಫಿ ಕಾಲೇಜಿನ ಅಬೂಬಕ್ಕರ್ ಮೊಯಿದಿನ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಸಂದೇಶ ನೀಡಿದರು.
ವಿವಿಧೆಡೆಗಳಲ್ಲಿ ನಡೆದ ಕಾರ್ಯಕ್ರಗಳಲ್ಲಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿಸೋಜ, ಸಿಸ್ಟರ್ ಜಾಸ್ಮಿನ್, ಸಿಸ್ಟರ್ ರೀನಾ ಸೆರಾವೋ, ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯ ಅವಿನಾಶ್ ಮಚಾದೋ, ಸಂದೀಪ್ ಡಿ ಅಲ್ಮೇಡಾ, ಕಳಾಯಿ ಸಂತ ಲೋರೆನ್ಸ್ ವಾಳೆಯ ಗುರಿಕಾರ ಬಿಜೋಯ್ ಮೊಂತೇರೊ ಮೊದಲಾದವರು ಉಪಸ್ಥಿತರಿದ್ದರು.
ಜೋರ್ಜ್ ಕ್ರಾಸ್ತಾ ಕೊಕ್ಕೆಜಾಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಸಿ ಕೆ ವೈ ಎಂ ಕಯ್ಯಾರ್, ಹೋಲಿ ಕ್ರಾಸ್ ಕ್ಲಬ್ ಜೋಡುಕಲ್ಲು, ಕ್ರೈಸ್ಟ್ ಕ್ಲಬ್ ಕಯ್ಯಾರ್, ಫಾತಿಮಾ ಮತ್ತು ಬಾಲಯೇಸು ವಾಳೆ ಸದಸ್ಯರು ಅಲ್ಲದೆ ಪಚ್ಚ೦ಬಳ ಫ್ರೆಂಡ್ಸ್ ಕ್ಲಬ್ ಸಹಕರಿಸಿದರು.