ಮಂಗಳೂರು, ಡಿ 2: ಒಖಿ ಚಂಡಮಾರುತ ಪಶ್ಚಿಮ ಕರಾವಳಿಗೆ ಅಪ್ಪಳಿಸಿದ್ದು, ಲಕ್ಷದ್ವೀಪದ ಕವರತ್ತಿ ಬಳಿ ಮಂಗಳೂರಿನ ಹಳೆಯ ಬಂದರಿನಿಂದ ಸರಕು ಹೊತ್ತು ಸಾಗುತ್ತಿದ್ದ ಎರಡು ಹಡಗುಗಳು ಮುಳುಗಿದೆ.
ಮಂಗಳೂರಿನಿಂದ ಲಕ್ಷದ್ವೀಪದತ್ತ ಹೊರಟಿದ್ದ 2 ಹಡಗುಗಳು ಓಖಿ ಚಂಡಮಾರುತದ ರಕ್ಕಸ ಅಲೆಗಳಿಗೆ ಸಿಲುಕಿ ಮುಳುಗಡೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಹೆಲಿಕಾಪ್ಟರ್ ಮೂಲಕ ಮುಂಬೈನ ನೌಕನೆಲೆ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಸಮುದ್ರ ಮಧ್ಯೆ ಸಿಲುಕಿಕೊಂಡು ಜೀವ ಕೈಯಲ್ಲಿ ಹಿಡಿದು ರಕ್ಷಣೆಗಾಗಿ ಇನ್ನೂ 8 ಮಂದಿ ಸಿಬ್ಬಂದಿಗಳು ಕಾಯುತ್ತಿದ್ದಾರೆ. ಒಂದು ಹಡಗು ಸಂಪೂರ್ಣವಾಗಿ ಮುಳುಗಿದ್ದು, ಇದರಲ್ಲಿದ್ದ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಮತ್ತೊಂದು ಹಡಗಿಗೂ ಕೂಡ ಹಾನಿಯಾಗಿದ್ದು, ಎಂಜಿನ್ ಬೇರ್ಪಟ್ಟಿದೆ. ಇದೀಗ ಅದರಲ್ಲಿದ್ದ 8 ಮಂದಿ ಪ್ರಾಣ ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ.
ನಿನ್ನೆ ಸಂಜೆ ಹವಾಮಾನ ವೈಪರಿತ್ಯದಿಂದ ಸ್ಥಗಿತಗೊಂಡಿದ್ದ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಮತ್ತೇ ಸಿಬ್ಬಂದಿಗಳು ತೊಡಗಿಕೊಂಡಿದ್ದಾರೆ.