ಮಂಗಳೂರು, ಜೂ08(Daijiworld News/SS): ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ 2018-19ನೇ ಸಾಲಿನ ವಾರ್ಷಿಕ ಆದಾಯ 24.22 ಕೋಟಿ ರೂ.ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 41 ಲಕ್ಷ ರೂ. ಆದಾಯ ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ.
ಕರ್ನಾಟಕ ರಾಜ್ಯ ಮುಜರಾಯಿ ದೇಗುಲಗಳ ಪೈಕಿ ಅಗ್ರಶ್ರೇಣಿಯಲ್ಲಿರುವ ದೇಗುಲಗಳಲ್ಲಿ ಕಟೀಲು ಕ್ಷೇತ್ರವೂ ಒಂದು. ಈ ಕ್ಷೇತ್ರದ ಸೇವೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಹೂವಿನ ಪೂಜೆಯದ್ದು, 2018-19 ನಡೆದ ಹೂವಿನ ಪೂಜೆ ಸೇವೆ ಬರೋಬ್ಬರಿ 5.5 ಲಕ್ಷ. ಅಂದರೆ ದಿನವೊಂದಕ್ಕೆ ಸರಾಸರಿ 1600ರಷ್ಟು ಸೇವೆಗಳು ಕ್ಷೇತ್ರದಲ್ಲಿ ನಡೆಯುತ್ತಿವೆ.
ವಿಶೇಷವೆಂದರೆ 2018-19ನೇ ಸಾಲಿನಲ್ಲಿ ಕಟೀಲಿನ 6 ಯಕ್ಷಗಾನ ಮೇಳಗಳಿಂದ ದೇಗುಲದ ನಿಧಿಗೆ 1 ಕೋಟಿ ರೂ. ಸಂದಾಯವಾಗಿದೆ ಎನ್ನಲಾಗಿದೆ.
2018ರ ಡಿಸೆಂಬರ್ 16ರಿಂದ 2019ರ ಜನವರಿ 29ರವರೆಗೆ ಕ್ಷೇತ್ರದಲ್ಲಿ ಜೀರ್ಣೋದ್ಧಾರದ ಪ್ರಯುಕ್ತ ವಿಶೇಷ ಸೇವೆಗಳಲ್ಲಿ ವ್ಯತ್ಯಯವಾಗಿತ್ತು. ಆದರೆ ಈ ಬಾರಿ ಕಟೀಲು ಕ್ಷೇತ್ರಕ್ಕೆ ಪ್ರತೀ ವರ್ಷ ಆಗಮಿಸುವ ಭಕ್ತರ, ಪ್ರವಾಸಿಗರ ಸಂಖ್ಯೆಯಲ್ಲಿ ಸತತ ಏರಿಕೆ ಕಂಡಿದೆ. ಜೊತೆಗೆ, 2018-19ನೇ ಸಾಲಿನ ವಾರ್ಷಿಕ ಆದಾಯ 24.22 ಕೋಟಿ ರೂ.ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 41 ಲಕ್ಷ ರೂ. ಆದಾಯ ಏರಿಕೆ ಕಂಡಿದೆ.