ಸಾಸ್ತಾನ, ಜೂ 07 (Daijiworld News/MSP): ಮಾಬುಕಳ ಸೇತುವೆಯಿಂದ ಮಹಿಳೆಯೊರ್ವಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೂ.7 ರ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಸಾಸ್ತಾನ ಅಂಚೆ ಕಚೇರಿಯಲ್ಲಿ 18 ವರ್ಷದಿಂದ ಅರೆಕಾಲಿಕ ಸಿಬ್ಬಂದಿಯಾಗಿ ದುಡಿಯುತ್ತಿರುವ ಮುದ್ದುಮನೆ ಸುವರ್ಣಲತಾ( 52) ಆತ್ಮಹತ್ಯೆಗೈದವರು. ಇಂದು ಬೆಳಿಗ್ಗೆ ಅಂಚೆ ಕಚೇರಿಯ ಬಾಗಿಲು ತೆರೆದು ಕಾರ್ಯನಿರ್ವಹಿಸುತ್ತಿದ್ದ ಇವರು ಬಳಿಕ ಕಚೇರಿಯ ಬೀಗದ ಕೀಯನ್ನು ನೆರೆಯ ಮನೆಯಲ್ಲಿ ಕೊಟ್ಟು ಅಲ್ಲಿಂದ ನೇರವಾಗಿ ಮಾಬುಕಳ ಸೇತುವೆ ಹೋಗಿ ನದಿಗೆ ಹಾರಿದ್ದಾರೆ ಪೊಲೀಸರು ತಿಳಿಸಿದ್ದಾರೆ .
ಈಕೆಯ ಪತಿ ಮೈಸೂರಿನಲ್ಲಿ ಉದ್ಯೋಗದಲ್ಲಿದ್ದು ಮದುವೆಯಾಗಿ ಹಲವಾರು ವರ್ಷವಾಗಿದ್ದರೂ ಮಕ್ಕಳಿಲ್ಲದ ಕೊರಗಿನಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಮೃತದೇಹ ಮೇಲಕ್ಕೆತ್ತಿದ್ದು , ಬ್ರಹ್ಮಾವರ ಪೊಲೀಸರು ತನಿಖೆ ನಡೆಸುತ್ತಿದ್ದರೆ.