ಮಲ್ಪೆ, (Daijiworld News/MSP): ನಾಲ್ಕು ಜನರ ದುಷ್ಕರ್ಮಿಗಳ ತಂಡವೊಂದು ಯುವಕನ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಜೂನ್ 7 ರ ಶುಕ್ರವಾರ ಬೆಳಗಿನ ಜಾವ ಮಲ್ಪೆ ಬಂದರಿನಲ್ಲಿ ನಡೆದಿದೆ.
ಪ್ರಾಣಾಪಾಯದಿಂದ ಪಾರಾದರೂ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಫರಂಗಿಪೇಟೆ ನಿವಾಸಿ ರಿಯಾಝ್(34) ಎಂಬವರು ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಫರಂಗಿಪೇಟೆ ಗ್ರಾಪಂ ಸದಸ್ಯರಾಗಿದ್ದಾರೆ.
ರಿಯಾಝ್ ಮೀನಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಸುಕಿನ ವೇಳೆ ಇತರ ಮೂವರೊಂದಿಗೆ ಮೀನಿನ ವಾಹನದಲ್ಲಿ ಮಲ್ಪೆ ಬಂದರಿಗೆ ಆಗಮಿಸಿದ್ದರು. ಬಂದರಿನಲ್ಲಿ ನಿಲ್ಲಿಸಿದ್ದ ಮೀನಿನ ವಾಹನದಿಂದ ಇತರರು ಇಳಿದು ಹೋಗಿದ್ದು ರಿಯಾಝ್ ಮಾತ್ರ ಅದರಲ್ಲೆ ಮಲಗಿದ್ದರು.
ಮೀನಿನ ವಾಹನವನ್ನು ಮಂಗಳೂರಿನಿಂದ ಕಾರಿನಲ್ಲಿ ಹಿಂಬಲಿಕೊಂಡು ಬಂದ ನಾಲ್ಕು ಜನರ ದುಷ್ಕರ್ಮಿಗಳು ತಂಡ ರಿಯಾಜ್ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದಾರೆ.
ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್, ಮಲ್ಪೆ ಎಸ್ಸೈ ಮಧು ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.