ಕಾಸರಗೋಡು : ಬೋಟ್ ಮಗುಚಿ ಓರ್ವ ಬೆಸ್ತ ನಾಪತ್ತೆಯಾಗಿದ್ದು, ಇಬ್ಬರು ನೀರು ಪಾಲಾದ ಘಟನೆ ನೀಲೇಶ್ವರ ಸಮುದ್ರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಕಾಞ೦ಗಾಡ್ ಹೊಸಹಿತ್ಲುವಿನ ಸುನಿಲ್ ಕುಮಾರ್ ( 40 ) ನಾಪತ್ತೆಯಾದವರು.
ಕರಾವಳಿ ಪೊಲೀಸರು ಮತ್ತು ಮೀನುಗಾರರ ರಕ್ಷಣಾ ತಂಡದ ಬೋಟ್ ನೆರವಿನಿಂದ ಇಬ್ಬರನ್ನು ರಕ್ಷಿಸಲಾಗಿದ್ದು, ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮುದ್ರ ಪ್ರಕ್ಷುಬ್ದವಾಗಿದ್ದು , ಇದರಿಂದ ಅಲೆಗಳ ಅಬ್ಬರಕ್ಕೆ ಬೋಟ್ ಮಗುಚಿ ಬಿದ್ದಿದೆ ಎನ್ನಲಾಗಿದೆ.