ಉಜಿರೆ,(Daijiworld News/MSP): ಉಜಿರೆ ಚಾರ್ಮಾಡಿ ರಸ್ತೆಯ ಅಂಚೆ ಕಚೇರಿ ಸಮೀಪದ ಗುಜರಿ ಅಂಗಡಿಗೆ ಗುರುವಾರ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಕುರಿತು ಮಾಹಿತಿ ಲಭಿಸಿದೆ.
ಸುಮಾರು 13 ಮಂದಿಯ ಅಧಿಕಾರಿಗಳ ತಂಡ ಬೆಳಗ್ಗಿನಿಂದ ಸಂಜೆ ತನಕ ತಪಾಸಣೆ ನಡೆದಿದೆ.
ಈ ಅಂಗಡಿಯಲ್ಲಿ ಅನೇಕ ಟನ್ ಗುಜರಿ ದಾಸ್ತಾನು ಇರಿಸಲಾಗಿದ್ದು, ಈ ಕುರಿತು, ಅಧಿಕಾರಿಗಳು ಪರಿಶೀಲಿಸಿದ್ದಾರೆ. ಬಳಿಕ ಅಜಿತ್ ನಗರದಲ್ಲಿರುವ ಅಂಗಡಿ ಮಾಲೀಕರ ಮನೆ ಮೇಲೆಯೂ ದಾಳಿ ನಡೆಸಿ ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ.