ಮಂಗಳೂರು,ನ.23(DaijiworldNews/AK): ಮಂಗಳೂರಿನಲ್ಲಿ ದೇಶದಮೊದಲಕೋಸ್ಟ್ಗಾರ್ಡ್ಅಕಾಡೆಮಿ ಸ್ಥಾಪನೆ. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜತೆಗೆ ವಿಲೀನ ಸೇರಿದಂತೆ ದಕ್ಷಿಣಕನ್ನಡದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಪ್ರಸ್ತಾವಿತ ಪ್ರಮುಖ ಯೋಜನೆಗಳನ್ನುಆದಷ್ಟು ಬೇಗಕಾರ್ಯಗತಗೊಳಿಸುವಂತೆ ಕೋರಿ ಸಂಸದಕ್ಯಾ.ಬ್ರಿಜೇಶ್ಚೌಟ ಅವರು ಕೇಂದ್ರಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ಅವರಿಗೆ ಮನವಿ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಇಂದುಸಚಿವರನ್ನು ಭೇಟಿಮಾಡಿರುವಸಂಸದಕ್ಯಾ.ಚೌಟ, ಈಹಿಂದೆ ನಿರ್ಮಲಾಸೀತಾರಾಮನ್ರಕ್ಷಣಾಸಚಿವರಾಗಿದ್ದಾಗ ಮಂಗಳೂರಿಗೆ ಮಂಜೂರು ಮಾಡಿದ್ದ ಕೋಸ್ಟ್ಗಾರ್ಡ್ಅಕಾಡೆಮಿಸ್ಥಾಪನೆಗೆ ಬಾಕಿಯಿರುವ ಪ್ರಕ್ರಿಯೆಗಳನ್ನುಆದಷ್ಟು ಬೇಗಪೂರ್ಣಗೊಳಿಸಬೇಕು. ಆರ್ಥಿಕ ಸಂಕಷ್ಟ ಸೇರಿ ನಾನಾ ಸವಾಲು ಎದುರಿಸುತ್ತಿರುವ ಕೊಂಕಣರೈಲ್ವೆನಿಗಮವನ್ನು ಭಾರತೀಯರೈಲ್ವೆಯೊಂದಿಗೆವಿಲೀನಗೊಳಿಸಿ ಈಮಾರ್ಗದ ರೈಲುಸೇವೆ ಹಾಗೂರೈಲ್ವೆಮೂಲಸೌಕರ್ಯಅಭಿವೃದ್ಧಿಪಡಿಸಬೇಕು. ಅಲ್ಲದೆ, ಮಂಗಳೂರನ್ನು ಜಾಗತಿಕಸಾಮರ್ಥ್ಯದ ಸೆಂಟರ್(ಜಿಸಿಸಿ) ಆಗಿಪರಿವರ್ತಿಸಿ ಜಾಗತಿಕ ಹೂಡಿಕೆ ಆಕರ್ಷಣೆಗೆ ಪೂರಕವಾಗುವ ಮೂಲಸೌಕರ್ಯಅಭಿವೃದ್ಧಿ, ಮಾನವಸಂಪನ್ಮೂಲ-ಕೌಶಲ್ಯಾಭಿವೃದ್ಧಿಗೆಬೇಕಾಗುವ ಅಗತ್ಯಕ್ರಮಕೈಗೊಳ್ಳಬೇಕು. ಜತೆಗೆ ಬ್ಯಾಂಕ್ಗಳತೊಟ್ಟಿಲು ಎಂದು ಕರೆಸಿಕೊಂಡಿರುವಮಂಗಳೂರಿನಲ್ಲಿಬ್ಯಾಂಕಿಂಗ್ಸಂಶೋಧನಾಹಾಗೂತರಬೇತಿಸಂಸ್ಥೆ(ಐಬಿಆರ್ಟಿ) ಸ್ಥಾಪಿಸಲುಸೂಕ್ತಕ್ರಮಕೈಗೊಳ್ಳಬೇಕೆಂದುಮನವಿಪತ್ರದಲ್ಲಿಕೋರಿದ್ದಾರೆ.
ಜಿಸಿಸಿಯಾಗಿಪರಿವರ್ತನೆಗೆ ವಿಪುಲ ಅವಕಾಶ
ಮಂಗಳೂರಿನಲ್ಲಿಅತ್ಯಾಧುನಿಕ ಬಂದರು ವ್ಯವಸ್ಥೆ ಹಾಗೂ ಅಂತಾರಾಷ್ಟ್ರೀಯಏರ್ಪೋರ್ಟ್ಮೂಲಕಮುಂಬೈ,ಬೆಂಗಳೂರುಸೇರಿದಂತೆದೇಶದಪ್ರಮುಖನಗರಗಳನ್ನುಸಂಪರ್ಕಿಸುವಸಾರಿಗೆವ್ಯವಸ್ಥೆಯಿದೆ. ಜತೆಗೆಮಂಗಳೂರಿನಲ್ಲಿ 200ಕ್ಕೂಅಧಿಕಕಂಪೆನಿಗಳಲ್ಲಿ 20 ಸಾವಿರವೃತ್ತಿಪರರುಕೆಲಸಮಾಡುತ್ತಿದ್ದಾರೆ. ಹೀಗಾಗಿ, ಮಂಗಳೂರುಪ್ರಮುಖಟಾಲೆಂಟ್ಪೂಲ್ಆಗಿಬೆಳೆಯುತ್ತಿದ್ದು, ವಿಶ್ವದರ್ಜೆಶಿಕ್ಷಣಸಂಸ್ಥೆಗಳು, ಐಟಿಕಂಪೆನಿಗಳು, ಆರೋಗ್ಯಸೇವೆ, ಇಂಧನಉತ್ಪಾದನೆಹೀಗೆಎಲ್ಲರೀತಿಯಪರಿಸರಸ್ನೇಹಿವಾತಾವರಣಹಾಗೂಮೂಲಸೌಕರ್ಯಹೊಂದಿರುವಹಿನ್ನಲೆಮಂಗಳೂರುನಗರವನ್ನುಗ್ಲೋಬಲ್ಕೆಪಾಸಿಟಿಸೆಂಟರ್ಆಗಿಪರಿವರ್ತಿಸುವುದಕ್ಕೆಪೂರಕಕ್ರಮತೆಗೆದುಕೊಳ್ಳಬೇಕು. ಆ ಮೂಲಕ ಜಾಗತಿಕ ಸಾಮರ್ಥ್ಯದ ಸೆಂಟರ್ಗಳಿಗೆ ತೆರಿಗೆ ರಿಯಾಯಿತಿ, ಕೌಶಲ್ಯಾಭಿವೃದ್ಧಿ, ಜಿಸಿಸಿಕೇಂದ್ರೀಕೃತಕೈಗಾರಿಕಾಪಾರ್ಕ್ಗಳಸ್ಥಾಪನೆಗೆ ಅಗತ್ಯಕ್ರಮಕೈಗೊಳ್ಳುವಂತೆ ಚೌಟ ಅವರು ತಮ್ಮಮನವಿಯಲ್ಲಿ ವಿವರಿಸಿದ್ದಾರೆ.
ಮಂಗಳೂರಿನಲ್ಲಿ ದೇಶದ ಮೊದಲ ಕೋಸ್ಟ್ಗಾರ್ಡ್ಅಕಾಡೆಮಿ ಸ್ಥಾಪನೆಗೆ ಸಂಬಂಧಿಸಿದ ವಿಸ್ತೃತಯೋಜನಾ ವರದಿ ಸದ್ಯ ರಕ್ಷಣಾ ಸಚಿವಾಲಯದ ಮುಂದಿದೆ. ರಾಜ್ಯಸರ್ಕಾರ ಕೂಡ ಈಯೋಜನೆಗೆ ಕೆಂಜಾರುಬಳಿ 158 ಎಕರೆ ಜಮೀನನ್ನು ಕೆಐಎಡಿಬಿನಿಂದ ಗುರುತಿಸಲಾಗಿದೆ. ಒಟ್ಟು 1385 ಕೋಟಿ ರೂ.ಗಳಈಯೋಜನೆ ಅಂತಿಮ ಹಂತದ ಪರಿಶೀಲನೆಯಲ್ಲಿದೆ. ಹೀಗಾಗಿ, ಕರಾವಳಿ ಭದ್ರತೆ ಹೆಚ್ಚಳ ಸೇರಿ ಮಂಗಳೂರಿನ ಆರ್ಥಿಕ ಸಾಮಾಜಿಕ ಅಭಿವೃದ್ಧಿ ಉತ್ತೇಜಿಸುವ ಈಕೋಸ್ಟ್ಗಾರ್ಡ್ಅಕಾಡೆಮಿಸ್ಥಾಪನೆಗೆ ಕೇಂದ್ರದಿಂದ ಬಾಕಿಯಿರುವ ಪ್ರಕ್ರಿಯೆ ಪೂರ್ಣಗೊಳಿಸಿ ಅದನ್ನು ಶೀಘ್ರ ಅನುಷ್ಠಾನಕ್ಕೆ ತರಬೇಕೆಂದು ಕ್ಯಾ. ಚೌಟಅವರು ಆಗ್ರಹಿಸಿದ್ದಾರೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ದಕ್ಷಿಣಕನ್ನಡಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳು, ಹೊಸ ಪ್ರಸ್ತಾವನೆಗಳ ಬಗ್ಗೆ ಸಂಸದರು ಚರ್ಚೆ ನಡೆಸಿದ್ದರು. ಅದರಂತೆ ಇದೀಗ ದೆಹಲಿಯಲ್ಲಿ ಅವರನ್ನು ಭೇಟಿಯಾಗಿ ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದ ಸವಿವರವಾದ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಮಂಗಳೂರಿಗೆ ಏಕೆ ಬೇಕು ಐಬಿಆರ್ಟಿಸಂಸ್ಥೆ(ಬ್ಯಾಂಕಿಂಗ್ಸಂಶೋಧನಾಹಾಗೂತರಬೇತಿಸಂಸ್ಥೆ) ಕೆನರಾಬ್ಯಾಂಕ್, ಸಿಂಡಿಕೇಟ್ಬ್ಯಾಂಕ್, ಕಾರ್ಪೋರೇಷನ್ಬ್ಯಾಂಕ್ನಂಥ ಪ್ರಮುಖ ಬ್ಯಾಂಕ್ಗಳು ಹುಟ್ಟಿರುವ ನಗರ ಮಂಗಳೂರು. ಇಂಥಹ ಬ್ಯಾಂಕ್ಗಳ ತವರೂರು ಎಂದು ಕರೆಸಿಕೊಂಡಿರುವ ಮಂಗಳೂರಿನಲ್ಲಿ ಐಬಿಆರ್ಟಿ ಸಂಸ್ಥೆ ಸ್ಥಾಪಿಸುವುದು ಈ ಭಾಗದ ಬ್ಯಾಂಕಿಂಗ್ ವಲಯದ ಪ್ರತಿಭೆಗಳ ಉತ್ತೇಜನೆಗೆಸಹಕಾರಿಯಾಗಲಿದೆ.
ಅಲ್ಲದೆ, ವಾಯು ಹಾಗೂ ಜಲಮಾರ್ಗದ ಮೂಲಕ ಬೆಂಗಳೂರು, ಮುಂಬೈ,ಗೋವಾ ಮುಂತಾದ ನಗರಗಳಿಗೆ ಹೆಚ್ಚಿನ ಸಂಪರ್ಕವ್ಯವಸ್ಥೆಯನ್ನು ಹೊಂದಿದೆ. ಜತೆಗೆ ಕೌಶಲ್ಯಾಧಾರಿತ ಹಣಕಾಸು,ಮ್ಯಾನೇಜ್ಮೆಂಟ್ ಹಾಗೂ ತಾಂತ್ರಿಕ ಪರಿಣತ ಪದವೀಧರರನ್ನುಸಿದ್ಧಗೊಳಿಸುವ ಸುರತ್ಕಲ್ನ ಎನ್ಐಟಿಕೆ, ಮಣಿಪಾಲ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಶೈಕ್ಷಣಿಕಸಂಸ್ಥೆಗಳಿರುವ ಕಾರಣ ಇಲ್ಲಿ ಐಬಿಆರ್ಟಿ ಸ್ಥಾಪಿಸುವುದು ಹೆಚ್ಚು ಸೂಕ್ತ ಮತ್ತು ಅವಶ್ಯಕ ಕೂಡ.