ಬಂಟ್ವಾಳ, ,ನ.23(DaijiworldNews/AK): ಬಂಟ್ವಾಳ ಪುರಸಭೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಹಾಗೂ ವಿವಿಧ ಗ್ರಾ.ಪಂ.ಗಳಲ್ಲಿ ತೆರವಾದ ಒಟ್ಟು 11 ಸ್ಥಾನಗಳಿಗೆ ನ. 23ರಂದು ಬಿರುಸಿನ ಮತದಾನ ನಡೆದಿದೆ.
ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಅತ್ಯಂತ ಶಾಂತಿಯುತವಾಗಿ ನಡೆದಿದ್ದು, ಬಂಟ್ವಾಳ ಪುರಸಭೆಯಲ್ಲಿ ಶೇ.72 ಮತದಾನವಾಗಿದ್ದರೆ, ಸಜಿಪಮುನ್ನೂರು ಗ್ರಾ.ಪಂ.ನಲ್ಲಿ ಮೂರು ಬೂತ್ ಗಳಲ್ಲಿ 66 ಶೇ., 61ಶೇ., 55 ಶೇ., ಮಂಚಿ ಶೇ.71, ಬಿಳಿಯೂರು 69ಶೇ, ಕುಡಂಬೆಟ್ಟು 65ಶೇ, ಸಜಿಪಮೂಡ 76 ಶೇ., ಪಂಜಿಕಲ್ಲು75ಶೇ. , ಪಂಜಿಕಲ್ಲು74 ಶೇ, ಅಮ್ಟಾಡಿ67 ಶೇ., ಬಡಗಬೆಳ್ಳೂರು 69 ಶೇ. ಮತದಾನವಾಗಿದೆ ಎಂದು ತಾಲೂಕುಕಛೇರಿ ಪ್ರಕಟಣೆ ತಿಳಿಸಿದೆ.
ಶಾಂತಿಯುತ ಮತದಾನದ ದೃಷ್ಟಿಯಿಂದ ಮತದಾನ ನಡೆದ ಬೂತ್ ಗಳ ಸುತ್ತ ಹೆಚ್ಚುವರಿ ಪೋಲೀಸ್ ತಂಡ ಕಾರ್ಯ ನಿರ್ವಹಿಸಿದೆ, ಸರ್ಕಲ್ ಪೋಲೀಸ್ ಇನ್ಸ್ ಪೆಕ್ಟರ್ ಸಹಿತ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಪೋಲೀಸ್ ಅಧಿಕಾರಿಗಳು ವಿಶೇಷ ಬಂದೋಬಸ್ತು ಒದಗಿಸಿದ್ದರು.