ಕಾಸರಗೋಡು,ನ.22(DaijiworldNews/AK): ಹಲವು ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿಯೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಕೃಷ್ಣನಗರದ ಮುಹಮ್ಮದ್ ಅಶ್ರಫ್ ( 42) ಬಂಧಿತ ಆರೋಪಿ .ವರ್ಕಾಡಿ ಪರಿಸರದ ವ್ಯಾಪಾರ ಮಳಿಗೆ , ಆರಧಾನಾಲಯ ಮೊದಲಾದ ಕಡೆಗಳಿಂದ ಈತ ಕಳವು ನಡೆಸಿದ್ದನು .
ಕೆಲದಿನಗಳ ಹಿಂದೆ ವರ್ಕಾಡಿ ಬಜಿಲಕೇರಿಯ ಬಾಲ ಯೇಸು ಪ್ರಾರ್ಥನಾ ಮಂದಿರ , ಪಾವಳದ ಶ್ರೀ ಕೊರಗಜ್ಜ ಕಟ್ಟೆ ಯ ಕಾಣಿಕೆ ಹುಂಡಿ ಹಾಗೂ ಪಾಡಿ ಎಂಬಲ್ಲಿ ಅಂಗಡಿಗೆ ನುಗ್ಗಿ ಕಳವು ನಡೆಸಿದ್ದನು. ಈತ ಮಲಪ್ಪುರಂ ನಲ್ಲಿ ರುವುದಾಗಿ ಲಭಿಸಿದ ಖಚಿತ ಮಾಹಿತಿಯಂತೆ ಪೊಲೀಸರು ಈತನನ್ನು ಬಂಧಿಸಿದ್ದಾರೆ