ಕಾರ್ಕಳ, ನ.16(DaijiworldNews/AK):ನಿಟ್ಟೆ ವಿದ್ಯುತ್ ಅಘಾತಕ್ಕೊಳಗಾಗಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಟ್ಟೆ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯ ಲತೇಶ್ ವಿರುದ್ಧ ಗ್ರಾಮಾಂತರ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಟ್ಟೆ ಪರಪ್ಪಾಡಿ ಬೋಂಟ್ರ ಮನೆಯಲ್ಲಿ ಲಲಿತಾ(೫೮) ಎಂಬವರು ವಿದ್ಯುತ್ ಅಪಘಾತದಲ್ಲಿ ಮೃತಪಟ್ಟವರು. ಅವರ ಸಹೋದರ ರಾಘು ಬೊಂಟ್ರ ಅವರ ಉತ್ತರಕ್ರಿಯೆ ನಡೆಯಬೇಕಾದ ಹಿನ್ನಲೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಲತೇಶ್ ಎಂಬವರಿಗೆ ಲೈಟಿಂಗ್ ಮತ್ತು ಶಾಮಿಯಾನ ಅಳವಡಿಸುವ ಕೆಲಸ ನೀಡಿದ್ದರು.
ತಿಥಿಕಾರ್ಯದ ಪೂರ್ವ ಭಾಗವಾಗಿ ಅಡುಗೆ ಪಾತ್ರೆ ತೊಳೆಯುತ್ತಿದ್ದ ಸಂದರ್ಭದಲ್ಲಿ ಶಾಮಿಯಾನದ ಕಬ್ಬಿಣದ ಕಂಬವನ್ನು ಮುಟ್ಟಿದ ವೇಳೆ ವಿದ್ಯುತ್ ಪ್ರವೇಶಿಸಿದ ಪರಿಣಾಮ ಈ ಘಟನೆ ನಡೆದಿದೆ. ಈ ಕುರಿತು ಕಾರ್ಕಳ ಗ್ರಾಮಂತಾರ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.