ಕಾಸರಗೋಡು, ನ.16(DaijiworldNews/AK):ಯುವಕ ಹಾಗೂ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವೆಳ್ಳರಿಕುಂಡು ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ.
ನೆಲ್ಲಿಯರ ಕಾಲನಿಯ ರಾಜೇಶ್ (24) ಮತ್ತು ಲಾವಣ್ಯ (18) ಮೃತಪಟ್ಟವರು. ಲಾವಣ್ಯ ಮಾಲೋತ್ ಕಸಬಾ ಹಯರ್ ಸೆಕಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ಯಾಗಿದ್ದಳು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ರಾಜೇಶ್ ಮೃತ ದೇಹ ಮನೆಯ ಸಮೀಪದ ಮರ ವೊಂದಕ್ಕೆ ನೇಣು ಬಿಗಿದು ಇಬ್ಬರ ಮೃತ ದೇಹ ಪತ್ತೆಯಾಗಿದೆ. ವೆಳ್ಳರಿಕುಂಡು ಠಾಣಾ ಪೊಲೀಸರು ಮಹಜರು ನಡೆಸಿದರು.