ಕಾಸರಗೋಡು, ನ.15(DaijiworldNews/AA): ಗೃಹಿಣಿಯೋರ್ವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಪಳ್ಳತ್ತಡ್ಕದ ನೆಲ್ಲಿಕ್ಕಲದ ಅರವಿಂದಾಕ್ಷನ್ ಅವರ ಪತ್ನಿ ಸರೋಜಿನಿ (50) ಮೃತಪಟ್ಟವರು.
ಬೆಳಿಗ್ಗೆ ಮನೆಯ ಶೆಡ್ ನಲ್ಲಿ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸರೋಜಿನಿಯ ಪುತ್ರಿಗೆ ಉದ್ಯೋಗ ನೀಡುವುದಾಗಿ ಡಿವೈಎಫ್ಐ ಮಾಜಿ ಜಿಲ್ಲಾ ಸಮಿತಿ ಸದಸ್ಯೆ ಸಚಿತಾ ರೈ ಸುಮಾರು 12.77 ಲಕ್ಷ ರೂ. ಪಡೆದು ವಂಚಿಸಿದ್ದರು. ಸರೋಜಿನಿ ರವರು ತನ್ನ ಚಿನ್ನಾಭರಣವನ್ನು ಅಡವಿರಿಸಿ ಹಣ ನೀಡಿದ್ದರು. ಅತ್ತ ಉದ್ಯೋಗ ಲಭಿಸದೆ ಇತ್ತ ಹಣ ಮರಳಿಸದೆ ಇದ್ದುದರಿಂದ ಮನ ನೊಂದಿದ್ದರು.
ಸಿಪಿಸಿಆರ್ಐನಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಸಚಿತಾ ರೈ ವಂಚಿಸಿದ್ದಳು. ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರಿರುವುದಾಗಿ ಶಂಕಿಸಲಾಗಿದೆ. ಬದಿಯಡ್ಕ ಠಾಣಾ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.