ಮೂಡುಬಿದಿರೆ, ಡಿ 1: ಜೈನ ಕಾಶಿ, ವಿದ್ಯಾ ಕಾಶಿ, ಶಿಕ್ಷಣ ಕಾಶಿ ಎಂದೇ ಪ್ರಖ್ಯಾತವಾಗಿರುವ ಮೂಡುಬಿದಿರೆಯಲ್ಲಿ 2017ನೇ ಸಾಲಿನ ಕನ್ನಡ ನಾಡು-ನುಡಿ ಸಂಸ್ಕೃತಿಯ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಇಂದು ಚಾಲನೆ ಸಿಕ್ಕಿದೆ.
ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಮೂಡುಬಿದಿರೆ ಮಧುವನಗಿತ್ತಿಯಂತೆ ಶೃಂಗಾರಗೊಂಡಿದ್ದು, ಖ್ಯಾತ ವಿಮರ್ಶಕ ಡಾ. ಸಿ ಎನ್ ರಾಮಚಂದ್ರನ್ ಭತ್ತದ ತೆನೆಗೆ ಹಾಲೆರೆಯುವ ಸಾಂಪ್ರದಾಯಿಕ ಮಾದರಿಯಲ್ಲಿ ಸಮ್ಮೇಳನವನ್ನು ಉದ್ಘಾಟಿಸಿದ್ದಾರೆ.
ಆಳ್ವಾಸ್ ನುಡಿಸಿರಿ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಆರಂಭವಾಗಿದ್ದು, ಇದೀಗ ನುಡಿಸಿರಿ ಕೃಷಿ, ಉದ್ಯೋಗ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೂ ವಿಸ್ತರಿಸಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲ ಸಮ್ಮೇಳನ ವೈಭವದಿಂದ ನಡೆಯಲಿದೆ.