ಕಾಸರಗೋಡು, ನ.12(DaijiworldNews/AA): ರಾಷ್ಟ್ರೀಯ ಹೆದ್ದಾರಿಯ ನುಳ್ಳಿಪಾಡಿಯಲ್ಲಿ ಅಂಡರ್ ಪಾಸ್ ವ್ಯವಸ್ಥೆ ಕಲ್ಪಿಸುವಂತೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ಇಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ನೂರಾರು ಮಂದಿ ಮುತ್ತಿಗೆ ಹಾಕಿದರು.
ಪ್ರತಿಭಟನೆಯನ್ನು ಶಾಸಕ ಎನ್. ಎ ನೆಲ್ಲಿ ಕುನ್ನು ಉದ್ಘಾಟಿಸಿದರು. ಕ್ರಿಯಾ ಸಮಿತಿ ಅಧ್ಯಕ್ಷ ಪಿ ರಮೇಶ್ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.
ಕೆ. ಎ ಮುಹಮ್ಮದ್ ಹನೀಫ್, ವೇಲಾ ಯುಧನ್, ರಾಜೀವನ್ ನಂಬ್ಯಾರ್, ವಿ. ರಾಜನ್, ಅಜೀಜ್ ಕಡಪ್ಪುರ, ಉಪೇಂದ್ರ ಕೋಟೆಕಣಿ ಮೊದಲಾದವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಅಂಡರ್ ಪಾಸ್ ಒದಗಿಸದಿದ್ದಲ್ಲಿ ಆಸ್ಪತ್ರೆ, ಶಾಲೆ, ವ್ಯಾಪಾರ ಸಂಸ್ಥೆ ಹಾಗೂ ಇನ್ನಿತರ ಕಡೆಗಳಿಗೆ ತೆರಳುವವರು ಕಿಲೋ ಮೀಟರ್ ಗಳಷ್ಟು ಸುತ್ತು ಬರಬೇಕಾದ ಸ್ಥಿತಿ ಉಂಟಾಗಲಿದ್ದು, ಇದರಿಂದ ಅಂಡರ್ ಪಾಸ್ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.