ಮಂಗಳೂರು, ಜೂ 4 Daijiworld News/MSP): ಜನಸಾಮಾನ್ಯರಿಗೆ ಬೇಕಾಗಿರೋದು ಕಾಂಗ್ರೆಸ್ ಇದು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ದೃಢಪಟ್ಟಿದೆ. ಲೋಕಸಭಾ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಸ್ಥಳೀಯ ನಗರ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಸಾಧ್ಯವಾಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುವ ಜನರು ಕೂಡ ಕಾಂಗ್ರೆಸ್ ಗೆ ಮತ ಚಲಾಯಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದ್ದಾರೆ.
ಅವರು ನಗರ ಲಾಲ್ಬಾಗ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಧರ್ಮದ ಮತ್ತು ಸೈನಿಕರ ಹೆಸರಿನಲ್ಲಿ ಗೆಲುವು ಸಾಧಿಸಿದರು. ಬಿಜೆಪಿ ಅಭಿವೃದ್ಧಿ ಹೆಸರಿನಲ್ಲಿ ಮತ್ತು ಪ್ರಾದೇಶಿಕ ಸಮಸ್ಯೆಗಳ ಪರಿಹಾರದ ದೃಷ್ಟಿಯಲ್ಲಿ ಮತ ಯಾಚಿಸಲಿಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಯ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇವಿಎಂ ಯಂತ್ರದ ಮೇಲೆ ಅನುಮಾನ ಮೂಡಲು ಕಾರಣವಾಗಿದೆ. ಇವಿಎಂ ಮಿಷನ್ ಬಗ್ಗೆ ಜನರಲ್ಲಿ ಸಂಶಯವಿದ್ದು,ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಜನ ಸಾಮಾನ್ಯರಲ್ಲಿ ಗೊಂದಲವುಂಟಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟಣೆ ನೀಡಬೇಕಾಗಿದೆ ಎಂದರು.
ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿಕೋಟಾ ಶ್ರೀನಿವಾಸ್ ಪೂಜಾರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,ಬಿಜೆಪಿ ಪಕ್ಷ ಪ್ರತೀ ಹಬ್ಬಕ್ಕೂ ದಿನ ನಿಗದಿ ಮಾಡ್ತಾ ಇದ್ದಾರೆ.ಎಲ್ಲಾ ಹಬ್ಬಕ್ಕೂ ದಿನ ನೀಡ್ತಾ ಇದ್ರುರಂಜಾನ್ ಹಬ್ಬ ಮರೆತಿರಬೇಕು ಇಲ್ಲಂದ್ರೆ ಆ ದಿನವೂ ನಿಗದಿ ಮಾಡ್ತಾ ಇದ್ರು. ಬಿಜೆಪಿ ಕೇವಲ ಆಸೆಯಲ್ಲಿ ಕುಳಿತಿದೆ.ನಮ್ಮ ಮೈತ್ರಿ ಸರಕಾರ ಭದ್ರವಾಗಿದೆ ಎಂದರು. ಬಿಜೆಪಿಗೆ ಬೆಂಗಳೂರಿನಲ್ಲಿ ನಾಲ್ಕು ಕಾರ್ಪೊರೇಟರ್ ಒಗ್ಗೂಡಿಸಲಾಗಿಲ್ಲ. ಹೀಗಿರುವಾಗ 15 ಶಾಸಕರನ್ನು ಒಗ್ಗೂಡಿಸಲು ಸಾಧ್ಯವೇ ಎಂದು ಪ್ರಶ್ನಿಸಿರುವ ಅವರು ಇನ್ನು ಬಿಜೆಪಿಗೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದಿದ್ದಾರೆ.