ಮಂಗಳೂರು, ನ.03(DaijiworldNews/ AK): ಮಾದಕ ವಸ್ತು ಕಳ್ಳಸಾಗಣೆ ವಿರುದ್ಧ ಮಹತ್ವದ ಪ್ರಗತಿ ದಾಖಲಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಇಬ್ಬರನ್ನು ಬಂಧಿಸಿ, 50 ಸಾವಿರ ಮೌಲ್ಯದ ಎಂಡಿಎಂಎ, 10 ಸಾವಿರ ಮೌಲ್ಯದ ಎರಡು ಮೊಬೈಲ್ ಫೋನ್, 50 ಸಾವಿರ ಮೌಲ್ಯದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಬಜ್ಪೆಯಿಂದ ಕಟೀಲು ರಸ್ತೆಯಲ್ಲಿ ತೆಂಕವಕ್ಕಾರು ಗ್ರಾಮದ ಪೆರ್ಮುದೆ ಪಂಚಾಯತ್ ಕ್ರಾಸ್ ಬಳಿ ಮಾದಕವಸ್ತು ಮಾರಾಟ ಮಾಡುತ್ತಿದ್ದು ಪತ್ತೆಯಾಗಿದೆ.
ಬಂಧಿತರನ್ನು ಜೋಕಟ್ಟೆ, 62ನೇ ತೋಕೂರು ಗ್ರಾಮದ ಎಚ್ ಅಬ್ದುಲ್ ಖಾದರ್ ಅವರ ಪುತ್ರ ಉಮರ್ ಫಾರೂಕ್ (38) ಮತ್ತು ಬಜ್ಪೆ ಜರಿನಗರ ನಿವಾಸಿ ಮನ್ಸೂರ್ ಎಂಬವರ ಪುತ್ರ ಮಹಮ್ಮದ್ ಅಬ್ದುಲ್ ಜುನೈದ್ (34) ಎಂದು ಗುರುತಿಸಲಾಗಿದೆ.
ಸುಳಿವಿನ ಮೇರೆಗೆ ಸಿಸಿಬಿ ತಂಡವು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ನವೆಂಬರ್ 2 ರಂದು ಕಾರ್ಯಾಚರಣೆ ನಡೆಸಿ 9.11 ಗ್ರಾಂ ಎಂಡಿಎಂಎ ಮತ್ತು ಇತರ ನಿಷಿದ್ಧ ವಸ್ತುಗಳನ್ನು ಹೊಂದಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪಿಎಸ್ ಐ ರೇವಣಸಿದ್ದಪ್ಪ ನೇತೃತ್ವದಲ್ಲಿ ಸಿಸಿಬಿ ಘಟಕದ ವಿವಿಧ ಸಿಬ್ಬಂದಿ ತಂಡಕ್ಕೆ ಬೆಂಬಲ ನೀಡಿದರು. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.