ಬೆಳ್ತಂಗಡಿ, ಜೂ03(Daijiworld News/SM): ಲಂಚಕ್ಕಾಗಿ ಬೇಡಿಕೆಯಿಟ್ಟ ಪಿಡಿಓ ಅಧಿಕಾರಿಯೋರ್ವರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಪ್ರೇಮ್ ಸಿಂಗ್ ನಾಯಕ್ ಲಂಚಕ್ಕಾಗಿ ಬೇಡಿಕೆಯಿಟ್ಟ ಭ್ರಷ್ಟ ಅಧಿಕಾರಿ. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಘಟನೆ ನಡೆದಿದ್ದು, ಸುಮಾರು 9 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಭ್ರಷ್ಟ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಜಾಗದ ವಿಚಾರವಾಗಿ ಈಗಾಗಲೇ ವ್ಯಕ್ತಿಯೊಬ್ಬರು ಆರೋಪಿಯ ಖಾತಗೆ 8000 ರೂ. ವರ್ಗಾವಣೆ ಮಾಡಿದ್ದರು. ಆದರೆ ಪ್ರೇಮ್ ಸಿಂಗ್ ನಾಯಕ್ ಮತ್ತೆ 10000 ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಈ ಹಣವನ್ನು ಸ್ವೀಕರಿಸುವ ವೇಳೆ ಪ್ರೇಮ್ ಸಿಂಗ್ ನಾಯಕ್ ಎಸಿಬಿ ಬಲೆಗೆ ಬಿದ್ದಿದ್ದಾರೆ.