ಬಂಟ್ವಾಳ,ಅ.28(DaijiworldNews/AK): ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ, ಪ್ರೌಢಶಾಲಾ ತಾಲೂಕು ಮಟ್ಟದ ಕ್ರೀಡಾಕೂ ಆಯೋಜನೆಯಲ್ಲಿ ಬಂಟ್ವಾಳ ತಾಲೂಕುಮಟ್ಟದ ಕ್ರೀಡಾಕೂಟವು ಅತ್ಯುತ್ತಮ ಕ್ರೀಡಾ ವ್ಯವಸ್ಥೆಯೊಂದಿಗೆ ನಡೆಯುತ್ತಿರುವುದು ಶ್ಲಾಘನೀಯ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ , ಕಲ್ಲಡ್ಕ ವಲಯ ಕ್ರೀಡಾಕೂಟ ಸಮಿತಿ ಹಾಗೂ ಬಾಲವಿಕಾಸ ಆಂಗ್ಲ ಮಾದ್ಯಮ ಶಾಲೆ ಮಾಣಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಮೈದಾನದಲ್ಲಿ ಸೋಮವಾರ ಆರಂಭಗೊಂಡ 14 ರಿಂದ 17 ವಯೋಮಿತಿಯೊಳಗಿನ ಬಾಲಕ -ಬಾಲಕಿಯರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಎರಡು ದಿನಗಳ "ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಕೂಟ 2024-25" ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೆ ಸಮಾನ ಮನೋಭಾವದಿಂದ ಕ್ರೀಡೆಯನ್ನು ಸ್ವೀಕರಿಸಿ ದೇಶದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರು , ಶಾಲಾ ಸಂಚಾಲಕರಾದ ಪ್ರಹ್ಲಾದ ಶೆಟ್ಟಿ ಜೆ ದೀಪ ಪ್ರಜ್ವಲಿಸಿ ಕ್ರೀಡಾಕೂಟ ಉದ್ಘಾಟಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್. ಜಿ. ಪಥ ಸಂಚಲನಕ್ಕೆ ಚಾಲನೆ ನೀಡಿದರು.
ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಗೋಪಾಲ್ ಹೆಚ್. ಎ. ಕ್ರೀಡಾ ಕೂಟದ ಪದಕಗಳ ಅನಾವರಣ ಮಾಡಿದರು. ವೇದಿಕೆಯಲ್ಲಿ ಮುಂಬೈ ಉದ್ಯಮಿ ಮುಂಡಪ್ಪ ಎಸ್ ಪೈಯ್ಯಡೆ, ಸರಕಾರಿ ನೌಕರ ಸಂಘದ ಅಧ್ಯಕ್ಷ ಉಮಾನಾಥ ರೈ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ , ರಾಜ್ಯ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ರಾಜೇಂದ್ರ ರೈ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಹರಿಪ್ರಸಾದ್ ,ದೈಹಿಕ ಶಿಕ್ಷಣ ಅಧ್ಯಕ್ಷ ಇಂದು ಶೇಖರ್, ಚಿತ್ರಕಲಾ ಶಿಕ್ಷಕ ಸಂಘದ ಅಧ್ಯಕ್ಷ ಚೆನ್ನಕೇಶವ , ಜಿ.ಪಿ.ಟಿ. ಸಂಘ ಅಧ್ಯಕ್ಷ ಗುರುರಾಜ ಎನ್, ಸಿ.ಆರ್.ಪಿ. ಸತೀಶ್ ರಾವ್, ಪ್ರಮುಖರಾದ ಕಿರಣ್ ಕುಮಾರ್, ವಿದ್ಯಾಕುಮಾರಿ, ಜಗದೀಶ್ ರೈ, ಬಾಲವಿಕಾಸದ ಟ್ರಸ್ಟಿನ ಸದಸ್ಯೆ ಸುಭಾಷಿಣಿ ಎ ಶೆಟ್ಟಿ ಹಾಗೂ ಬಾಲವಿಕಾಸ ಶಾಲೆಯ ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ ,ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಜೆ ಶೆಟ್ಟಿ, ವ್ಯವಸ್ಥಾಪಕಿ ನಯನಾ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಕ ಪರಿವೀಕ್ಷಕ ಶಿವಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು .
ಕಲ್ಲಡ್ಕ ವಲಯ ಕ್ರೀಡಾಸಮಿತಿ ಅಧ್ಯಕ್ಷ ಕಮಲಾಕ್ಷ ಸ್ವಾಗತಿಸಿದರು. ಕಾರ್ಯದರ್ಶಿ ಮಹೇಶ್ ಶೆಟ್ಟಿ ಸ್ಮರಣಿಕೆ ನೀಡಿದರು. ಯಜ್ಞೇಶ್ವರಿ ಎನ್., ಸುಧಾ ಎನ್ .ರಾವ್ ನಿರೂಪಿಸಿದರು. ಜಗದೀಶ್ ಬಾಳ್ತಿಲ ವಂದಿಸಿದರು.
ಕ್ರೀಡಾಕೂಟವನ್ನು ನಾಡಗೀತೆಯೊಂದಿಗೆ ಆರಂಭಿಸಿ, ಕ್ರೀಡಾಧ್ವಜದೊಂದಿಗೆ ಪಥಸಂಚಲನ ನಡೆಸಲಾಯಿತು.ಈ ಪಥಸಂಚಲನದಲ್ಲಿ ಕ್ರಮವಾಗಿ ಕಲ್ಲಡ್ಕ, , ವಿಟ್ಲ , ವಾಮದಪದವು ಹಾಗೂ ಬಂಟ್ವಾಳ ವಲಯಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಕ್ರೀಡಾ ಜ್ಯೋತಿಯನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ ಅತಿಥೇಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ನೆರವೇರಿಸಿದರು.ಈ ಕ್ರೀಡಾ ಕೂಟದಲ್ಲಿ ಒಟ್ಟು 680 ಕ್ರೀಡಾಪಟುಗಳು ,128 ಕ್ರೀಡಾಧಿಕಾರಿಗಳು ಹಾಗೂ ದೈಹಿಕ ಶಿಕ್ಷಕರು ಪಾಲ್ಗೊಂಡಿದ್ದರು.
ಗಮನಸೆಳೆದ ಡಿಜಿಟಲ್ ಪ್ರಮಾಣಪತ್ರ
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ವಿದ್ಯಾರ್ಥಿಗಳ ಭಾವಚಿತ್ರವಿರುವ ಪ್ರಮಾಣಪತ್ರವನ್ನು ನೀಡುವ ಡಿಜಿಟಲ್ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿಜೇತ ವಿದ್ಯಾರ್ಥಿಗಳು ಭಾವಚಿತ್ರವಿರುವ ಪ್ರಮಾಣಪತ್ರವನ್ನು ಪಡೆದು ಸಂಭ್ರಮಿಸಿದರು. ಬಾಲವಿಕಾಸ ಆಂಗ್ಲಮಾದ್ಯಮ ಶಾಲೆಯ ವತಿಯಿಂದ ಮಾಡಲಾದ ಈ ವ್ಯವಸ್ಥೆಗೆ ಅತಿಥಿಗಳಿಂದಲೂ ಶ್ಲಾಘನೆ ಕೇಳಿಬಂತು.