ಮಂಗಳೂರು,ಅ.28(DaijiworldNews/AK): ಅ.29ರಂದು ಇಂಡಿಯನ್ ಕಸ್ಟಮ್ಸ್ ಮಂಗಳುರು ಕಮಿಷನರೇಟ್ ಪ್ರಸ್ತುತ ಪಡಿಸುವ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ನೀಡುವ ಶಿಬಿರವನ್ನು ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.
ಅಕ್ಟೋಬರ್ 29, ಮಂಗಳವಾರ, ಮಧ್ಯಾಹ್ನ 1.00 ರಿಂದ ಮಂಗಳೂರಿನ ನಂತೂರು, ಪಡುವ ಪ್ರೌಢಶಾಲೆಯ ಪಕ್ಕದಲ್ಲಿರುವ ಸಿಒಡಿಪಿಯಲ್ಲಿ ನಡೆಯಲಿದೆ. ಇಂಡಿಯಾನಾ ಕ್ಯಾನ್ಸರ್ ಸೆಂಟರ್ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ ‘ಜ್ಯುವೆಲ್ ಗ್ರೂಪ್’ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಸಿ.ಟಿ ಕಾರ್ಪೋರೇಷನ್ನ ಪೌರ ಕಾರ್ಮಿಕರಿಗೆ ಮತ್ತು ಅವರ ಕುಟುಂಬವರು ಭಾಗವಹಿಸಿ ಜಾಗೃತಿ ಶಿಬಿರದ ಸದುಪಯೋಗ ಪಡೆಯಬಹುದಾಗಿದೆ.ಅಲ್ಲದೆ, ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಯ ತಂಡದಿಂದ ಉಚಿತ ತಪಾಸಣೆಗಾಗಿ ಈ ಅಪರೂಪದ ಅವಕಾಶವನ್ನು ಪಡೆಯಬಹುದು.ಮಧ್ಯಾಹ್ನ 3.00 ಗಂಟೆಗೆ ಕಿರು ವೇದಿಕೆ ಕಾರ್ಯಕ್ರಮ ನಡೆಯಲಿದೆ.