ಉಡುಪಿ, ಅ.28(DaijiworldNews/AA): ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಉಡುಪಿ ಸಾಯಿ ರಾಧಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ್ ಎಸ್ ಶೆಟ್ಟಿ ಕಾಪು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೇವಸ್ಥಾನದ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ಬಿ ಕೆ, ಹಾಗೂ ನೂತನವಾಗಿ ಆಯ್ಕೆಯಾದ ವ್ಯವಸ್ಥಾಪನಾ ಸಮಿತಿ ಸದಸ್ಯರ ಸಮ್ಮುಖದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.
ಮುಖ್ಯ ಅರ್ಚಕ ನಾರಾಯಣ ತಂತ್ರಿ, ರವಿಕುಮಾರ್ ಮಂದಾರ, ಶಶಿಧರ ಸುವರ್ಣ ಉಳಿಯಗೋಳಿ, ಸದಾನಂದ ಎ ಸುವರ್ಣ ಪೊಲಿಪು, ಅಶ್ವಿನಿ ಬಂಗೇರ ಕಾಪು, ಶಾಂತಲತಾ ಎಸ್ ಶೆಟ್ಟಿ ಮಲ್ಲಾರು, ನಾಗರಾಜ್ ಎಸ್ ಮೂಳೂರು, ಶ್ರೀಕಾಂತ್ ಕಾಪು ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.