ಮಂಗಳೂರು, ಅ.27(DaijiworldNews/AA): ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಂಗಳೂರು, ಇವರ ವತಿಯಿಂದ ಸ್ನೇಹ ಮಿಲನ-ಸಿನಿರಂಗ ಪುರಸ್ಕಾರ ಕಾರ್ಯಕ್ರಮವು ಅಕ್ಟೋಬರ್ 27ರ ಸಂಜೆ 4.30ರಿಂದ 7.30ರವರೆಗೆ ಮಂಗಳೂರಿನ ಅಶೋಕ ನಗರ, ಮಹಾಗಣಪತಿ ದೇವಸ್ಥಾನದ ಬಳಿ ಉರ್ವಸ್ಟೋರ್, ಪೊಲೀಸ್ ಸ್ಟೇಷನ್ ಹಿಂಬದಿ, ಬ್ರಹ್ಮಕುಮಾರೀಸ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಿರಿಯ ಸಿನಿ-ರಂಗ ನಿರ್ದೇಶಕ ವಿಜಯ ಕುಮಾರ್ ಕೊಡಿಯಲ್ ಬೈಲ್, ಹಿರಿಯ ರಂಗ ನಟ ವಸಂತ ವಿ ಅಮೀನ್, ಬಹುಮುಖ ಹಾಸ್ಯ ಕಲಾವಿದ ಭೋಜರಾಜ್ ವಾಮಂಜೂರು, ಹಿರಿಯ ಹಾಸ್ಯನಟ ಅರವಿಂದ ಬೋಳಾರ್, ಹಿರಿಯ ಸಿನಿ-ರಂಗ ನಟ ರಮೇಶ್ ರೈ ಕುಕ್ಕುವಳ್ಳಿ, ಪತ್ರಕರ್ತ-ರಂಗಕರ್ಮಿ ಪರಮಾನಂದ ಸಾಲ್ಯಾನ್, ಸಿನಿ-ರಂಗನಟಿ ಕುಮಾರಿ ರೂಪ ವರ್ಕಾಡಿ, ಸೃಜನ ಶೀಲ ಯುವ ಸಾಹಿತಿ ಶಶಿರಾಜ್ ಕಾವೂರು, ರಂಗಮಿತ್ರ ಪತ್ರಕರ್ತ ಜಗನ್ನಾಥ್ ಶೆಟ್ಟಿ ಬಾಳ, ಪ್ರಸಿದ್ಧ ಸಂಗೀತ ನಿದೇಶಕ ಗುರು ಬಾಯರ್, ಸಿನಿ-ರಂಗನಟ ವಿನೀತ್ ಕುಮಾರ್, ರಂಗ ನಟಿ ನಮಿತ ಕಿರಣ್, ಸಿನಿಮಾ ನಟ-ನಿರ್ದೇಶಕ ರಾಹುಲ್ ಅಮೀನ್ ಅವರಿಗೆ ಸಿನಿರಂಗ ಪುರಸ್ಕಾರ ಮಾಡಲಾಗುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ವಹಿಸಲಿದ್ದು, ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಚಿನ್ನಪ್ಪ ಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಿನಿಮಾ ನಿರ್ದೇಶಕರಾದ ಚಂದ್ರಹಾಸ ಆಳ್ವಾ ಆಗಮಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರಿನ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಘನ ಉಪಸ್ಥಿತಿ ಇರಲಿದೆ. ಡಾ.ಕೆ.ಆರ್ ಶೆಟ್ಟಿ ತುಳು ತಿರ್ಲ್ ಅಜಕೆ ಚಾವಡಿ, ನಿಟ್ಟೆ ವಿ.ವಿ ಮಂಗಳೂರು ಇದರ ಸಂಯೋಜಕಿ ಸಾಯಿಗೀತ ಅವರು ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬ್ರಹ್ಮಾಕುಮಾರೀಸ್, ಮಂಗಳೂರು ಇದರ ಸಂಚಾಲಕರಾದ ಬ್ರಹ್ಮಾಕುಮಾರಿ ವಿಶ್ವೇಶ್ವರಿ ಅವರು ಈಶ್ವರೀಯ ಸಂದೇಶ ನೀಡಲಿದ್ದಾರೆ.