ಕಾರ್ಕಳ, ಅ.25(DaijiworldNews/AA): ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನು ಪತ್ನಿಯೇ ಹತ್ಯೆ ಮಾಡಿರುವ ಘಟನೆ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ನಡೆದಿದೆ.
ಮೃತರನ್ನು ಕಾರ್ಕಳ ಮರ್ಣೆ ಗ್ರಾಮದ ಬಾಲಕೃಷ್ಣ (44) ಎಂದು ಗುರುತಿಸಲಾಗಿದೆ.
ಬಾಲಕೃಷ್ಣ ಅವರು ಕಳೆದ 25 ದಿನಗಳಿಂದ ಜ್ವರ, ವಾಂತಿಭೇದಿಯಿಂದ ಬಳಲುತ್ತಿದ್ದರು. ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ವೈದ್ಯರು ಬಾಲಕೃಷ್ಣ ಅವರಿಗೆ ಜಾಂಡೀಸ್ ಇದೆ ಎಂದು ತಿಳಿಸಿದ್ದರು. ಬಳಿಕ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ, ಮಂಗಳೂರು ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಬಾಲಕೃಷ್ಣ ಅವರು ಅ.20 ರಂದು ಮನೆಯಲ್ಲಿ ಸಾವನ್ನಪ್ಪಿದ್ದರು.
ಇದೀಗ ಬಾಲಕೃಷ್ಣ ಅವರ ಸಾವಿನ ಬಗ್ಗೆ, ಮೃತರ ಸಹೋದರ ರಾಮಕೃಷ್ಣ (42) ಎಂಬುವವರು ಸಂಶಯ ವ್ಯಕ್ತಪಡಿಸಿದ್ದು, ಅಜೇಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕೃಷ್ಣ ಅವರ ಪತ್ನಿ ಪ್ರತಿಮಾ ಅವರು ಹಿರ್ಗಾನ್ನ ದಿಲೀಪ್ ಎಂಬ ವ್ಯಕ್ತಿಯೊಂದಿಗೆ ಪೂರ್ವ ಸಂಬಂಧವನ್ನು ಹೊಂದಿದ್ದರು. ದಿಲೀಪ್ನೊಂದಿಗಿನ ಸ್ನೇಹಕ್ಕೆ ಬಾಲಕೃಷ್ಣ ವಿರೋಧಿಸಿದ್ದಕ್ಕಾಗಿ ಹತಾಶಳಾಗಿ ಪ್ರತಿಮಾ ಅವನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು. ಪ್ರತಿಮಾ ಮತ್ತು ದಿಲೀಪ್ ಕೊಲೆಗೆ ಯೋಜನೆ ರೂಪಿಸಿದ್ದು, ಬಾಲಕೃಷ್ಣನ ಆಹಾರದಲ್ಲಿ ವಿಷಕಾರಿ ಪದಾರ್ಥವನ್ನು ಸೇರಿಸಲು ದಿಲೀಪ್ ನೀಡಿದ್ದು, ಆತನ ಆರೋಗ್ಯ ಕ್ರಮೇಣ ಕ್ಷೀಣಿಸಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜೊತೆಗೆ ಅಕ್ಟೋಬರ್ 20 ರಂದು ಬೆಳಗಿನ ಜಾವ 1:30 ರ ಸುಮಾರಿಗೆ ದಿಲೀಪ್ ಅವರ ಮನೆಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಮತ್ತು ಪ್ರತಿಮಾ ಅವರು ಬೆಡ್ಶೀಟ್ ಬಳಸಿ ಬಾಲಕೃಷ್ಣನನ್ನು ಉಸಿರುಗಟ್ಟಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ದೂರಿನ ಮೇರೆಗೆ ಅಜೆಕಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಬಾಲಕೃಷ್ಣ ಅವರು ಮೃತಪಟ್ಟಿದ್ದರಿಂದ ಸಂಶಯದಿಂದ ಪ್ರತಿಮಳ ಅಣ್ಣ ಸಂದೀಪರವರು ಪ್ರತಿಮಳಲ್ಲಿ ಪದೇ ಪದೇ ವಿಚಾರಿಸಿದ್ದು, ಈ ಸಮಯ ಪ್ರತಿಮಳು ಅವಳ ಮತ್ತು ದಿಲೀಪ ಅವರ ಗೆಳೆತನಕ್ಕೆ ಅಡ್ಡ ಬರುತ್ತಿದ್ದ ಬಾಲಕೃಷ್ಣನನ್ನು ಕೊಲೆ ಮಾಡಲು ಯೋಚಿಸಿ ಅವರು ಮಾತನಾಡಿಕೊಂಡು ತಾನು ಹೇಳಿದಂತೆ ದಿಲೀಪ ಹೆಗ್ಡೆಯು ಯಾವುದೋ ವಿಷ ಪದಾರ್ಥ ತಂದು ಇದನ್ನು ಬಾಲಕೃಷ್ಣನಿಗೆ ಊಟದಲ್ಲಿ ಹಾಕಿ ಕೊಡು ಅವನು ನಿಧಾನವಾಗಿ ಸಾಯುತ್ತಾನೆ ಎಂದು ಹೇಳಿ ತನಗೆ ಕೊಟ್ಟಿದ್ದು, ಇದನ್ನು ನಾನು ಅವರಿಗೆ ಊಟದಲ್ಲಿ ಹಾಕಿ ಕೊಟ್ಟಿರುತ್ತೇನೆ ಎಂದು ತಿಳಿಸಿದ್ದಾಳೆ.
ಸದ್ಯ ಮೃತ ಬಾಲಕೃಷ್ಣ ಅವರ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.