ಕುಂದಾಪುರ,(Daijiworld News/MSP): ಸಾಲಿಗ್ರಾಮ ಶ್ರೀಗುರುನರಸಿಂಹ ದೇವರಲ್ಲಿ ಭಾನುವಾರ ಉತ್ತಮ ಮಳೆಗಾಗಿ ಪ್ರಾರ್ಥಿಸಿ ಸಮಾನ ಮನಸ್ಕ ಪುರೋಹಿತರು ಪರ್ಜನ್ಯ ಜಪವನ್ನು ಶ್ರೀದೇವಳದ ಶಂಖ ತೀರ್ಥ ಸರೋವರದಲ್ಲಿ ಸೇವಾರೂಪದಲ್ಲಿ ಬೆಳಿಗ್ಗೆ ಗಂಟೆ 7ರಿಂದ 9ರವರೆಗೆ ಮಾಡಿದರು.
ಶ್ರೀದೇವಳದ ತಂತ್ರಿಗಳಾದ ವೇ.ಮೂ. ಕೃಷ್ಣ ಸೋಮಯಾಜಿ, ಅರ್ಚಕರಾದ ವೇ.ಮೂ. ಚಂದ್ರಶೇಖರ ಅಡಿಗ, ಪುರೋಹಿತರಾದ ಗುಂಡ್ಮಿ ವೇ.ಮೂ. ವೆಂಕಟರಮಣ ನಾವಡ, ವೇ.ಮೂ. ಚಿದಾನಂದ ಐತಾಳ ಮತ್ತು ಸಹ ಪುರೋಹಿತರು, ಆಡಳಿತ ಮಂಡಳಿಯ ಸದಸ್ಯರಾದ ವೇ.ಮೂ.ಚಂದ್ರಶೇಖರ ಉಪಾಧ್ಯಾಯರು ಉತ್ತಮ ಮಳೆ ಹಾಗೂ ಬೆಳೆಗಾಗಿ ಶ್ರೀಗುರುನರಸಿಂಹ ದೇವರಲ್ಲಿ ಫಲ ಇಟ್ಟು ಪ್ರಾರ್ಥಿಸಿ ಜಪವನ್ನು ಪ್ರಾರಂಭಿಸಿದರು.
ಒಟ್ಟು ಐದು ದಿನಗಳು ಜಪ ಬೆಳಿಗ್ಗೆ 7 ರಿಂದ 8.30ರವರೆಗೆ ಜಪ ನಡೆಯಲಿದ್ದು ಲೋಕಕಲ್ಯಾಣಾರ್ಥವಾಗಿ ಮಾಡುವ ಈ ಕಾರ್ಯಕ್ರಮದಲ್ಲಿ ಪುರೋಹಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸುವಂತೆ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ. ಅನಂತಪದ್ಮನಾಭ ಐತಾಳರು ಮನವಿ ಮಾಡಿದರು