ವಿಟ್ಲ, ಜೂ 02: (Daijiworld News/SM): ಮಾಣಿಲ ಗ್ರಾಮ ಪಂಚಾಯತ್ ನ ಎನ್.ಆರ್.ಎಲ್.ಎಂ. ಸಂಜೀವಿನಿ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸವಲತ್ತುಗಳ ಮಾಹಿತಿ ಕಾರ್ಯಾಗಾರ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯ ಸವಲತ್ತುಗಳ ಬಗ್ಗೆ ಸಹಾಯಕ ನಿರ್ದೇಶಕ ಪ್ರಶಾಂತ್ ಬಳಂಜ ಮಾಹಿತಿ ನೀಡಿದರು. ಎನ್.ಆರ್.ಎಲ್.ಎಂ. ಸಂಜೀವಿನಿ ಒಕ್ಕೂಟ ಸ್ವ ಉದ್ಯೋಗದ ಬಗ್ಗೆ ಜಿಲ್ಲಾ ಕಾರ್ಯಕ್ರಮದ ವ್ಯವಸ್ಥಾಪಕರಾದ ಹರಿಪ್ರಸಾದ್ ಮಾಹಿತಿ ನೀಡಿದರು.
ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್, ಗ್ರಾಮಪಂಚಾಯತ್ ಅಧ್ಯಕ್ಷ ರಾಜೇಶ್ ಬಾಳೆಕಲ್ಲು, ಉಪಾಧ್ಯಕ್ಷೆ ವಿಶಾಲಾಕ್ಷಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಮುಖ ಸವಲತ್ತುಗಳು:
೧. ಕುರಿ/ ಮೇಕೆ/ ಕೋಳಿ / ಹಂದಿ ಶೆಡ್ ನಿರ್ಮಾಣ
೨. ಭೂ ಅಭಿವೃದ್ಧಿ / ಭೂ ಸಮತಟ್ಟು
೩. ತೋಟಗಾರಿಕೆ ಬೆಳೆಗಳು
೪. ಬಯೋಗ್ಯಾಸ್ ಘಟಕ
೫. ರೈತರ ಜಮೀನಿನಲ್ಲಿ ಗಿಡಗಳ ನೆಡುವಿಕೆ
೬. ಕೊಳವೆ ಬಾವಿ ಮರುಪೂರಣ ಘಟಕ
೭. ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ
೮. ಹಿಪ್ಪು ನೆರಳು ತೋಟ
೯. ಕೆರೆ / ಗೋ ಕಟ್ಟೇ ಹೂಳೆತ್ತುವುದು
೧೦. ಇಂಗು ಗುಂಡಿಗಳ ನಿರ್ಮಾಣ
೧೧. ಕೃಷಿ ಹೊಂಡ ನಿರ್ಮಾಣ
ಸಾರ್ವಜನಿಕ ಕಾಮಗಾರಿಗಳು:
ಆಟದ ಮೈದಾನ ನಿರ್ಮಾಣ, ಸ್ಮಶಾನ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಪೌಷ್ಟಿಕ ತೋಟ, ಅಂಗನವಾಡಿ ಕಟ್ಟಡ, ಗ್ರಾಮೀಣ ಮಾರುಕಟ್ಟೆ, ಕಾಂಕ್ರೀಟ್ ರಸ್ತೆ, ಕಿಂಡಿಅಣೆಕಟ್ಟು, ತಡೆಗೋಡೆ ನಿರ್ಮಾಣ
ತೋಟಗಾರಿಕಾ ಬೆಳೆಗಳು:
ಮಾವು, ತೆಂಗು, ಅಡಿಕೆ ಗಿಡಗಳು, ಕಾಳು ಮೆಣಸು ಇತ್ಯಾದಿಗಳಿಗೆ ಸಹಾಯಧನ ಒದಗಿಸಲಾಗುತ್ತಿದೆ. ಇವುಗಳು ಮಾತ್ರವಲ್ಲದೆ ಗೃಹಪಯೋಗಿ ವಸ್ತುಗಳ ತಯಾರಿಕೆಗೂ ಪ್ರೋತ್ಸಾಹಧನ ಒದಗಿಸಲಾಗುತ್ತದೆ.