ಸುಳ್ಯ,ಅ.15(DaijiworldNews/TA):ತುಳಸಿ ಗಿಡದಲ್ಲಿ ದಾಸವಾಳ ಹೂವು ಅರಳುತ್ತಿವೆ ಎಂದರೆ ಅಚ್ಚರಿಯಾಗೋದು ಸಹಜ. ಆದರೆ ಇದು ನಿಜ ಎಂದು ಎಂದು ಅಜ್ಜಾವರದ ಶಾಂತಿಮಜಲಿನ ಈ ಮನೆಯವರು ಹೇಳುತ್ತಾರೆ. ಅಜ್ಜಾವರ ಗ್ರಾಮದ ಶಾಂತಿಮಜಲಿನ ಭವಾನಿ ಅವರ ಮನೆಯಂಗಳದ ತುಳಸಿ ಗಿಡದಲ್ಲಿ ಅರಳುತ್ತಿರುವುದು ದಾಸವಾಳ ಹೂವು. ಒಂದಲ್ಲಾ. ಎರಡಲ್ಲ.. 3 ದಾಸವಾಳ ಹೂವುಗಳು ಅರಳಿ ನಿಂತಿದೆ.
ಒಂದು ವಾರದಲ್ಲಿ 3ನೇ ಬಾರಿಗೆ ಈ ರೀತಿ ಹೂವು ಅರಳಿ ನಿಂತಿದೆ. ತುಳಸಿ ಗಿಡದ ದಾಸವಾಳ ನೋಡುಗರಲ್ಲಿ ಕುತೂಹಲ ಮೂಡಿಸುತ್ತಿದೆ. ತುಳಸಿ ಗಿಡದಲ್ಲಿ ಇನ್ನೂ ಕೂಡ ಹೂವಿನ ಮೊಗ್ಗು ಇದ್ದು ಇನ್ನಷ್ಟು ದಾಸವಾಳ ಗಿಡಗಳು ಅರಳುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಗಿಡ ಕಸಿ ಮಾಡಿದರೆ ಈ ರೀತಿ ತುಳಸಿ ಗಿಡದಲ್ಲಿ ದಾಸವಾಳ ಅರಳಬಹುದು. ಆದರೆ ಇವರ ಮನೆಯಲ್ಲಿ ಇವರೇನು ಹಾಗೆ ಕಸಿ ಕಟ್ಟಿಲ್ಲ.ತನ್ನಷ್ಟಕ್ಕೇ ಈ ವಿಸ್ಮಯ ಕಂಡು ಬಂದಿದೆ ಎನ್ನುತ್ತಾರೆ ಅವರು. ತುಳಸಿ ಗಿಡದ ಸಮೀಪದಲ್ಲಿಯೇ ದಾಸವಾಳ ಹೂವಿನ ಗಿಡಗಳು ಇದೆ.
ಆದುದರಿಂದ ತುಳಸಿ ಗಿಡ ಹಾಗೂ ದಾಸವಾಳ ಪರಾಗಸ್ಪರ್ಶ ಆಗಿರುವ ಕಾರಣ ಈ ರೀತಿಯ ವಿಸ್ಮಯ ಉಂಟಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ. ತುಳಸಿ ಗಿಡದಲ್ಲಿ ದಾಸವಾಳ ಅರಳಿರುವುದು ನೋಡಲು ಹಲವು ಮಂದಿ ಕುತೂಹಲಿಗಳು ಆಗಮಿಸುತ್ತಿದ್ದಾರೆ.
ಅಜ್ಜಾವರ ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿಭಟ್ ಹಾಗೂ ಸದಸ್ಯರು ಆಗಮಿಸಿ ಇದನ್ನು ವೀಕ್ಷಿಸಿ ಈ ರೀತಿ ತುಳಸಿ ಗಿಡದಲ್ಲಿ ದಾಸವಾಳ ಅರಳಿರುವ ಮಾಹಿತಿ ನೀಡಿದ್ದಾರೆ. ಸದಸ್ಯರಾದ ಹರಿಣಿ, ಶ್ರೀಲತಾ ಶಾಂತಿಮಜಲು ಮತ್ತಿತರರು ಉಪಸ್ಥಿತರಿದ್ದರು.