ಸುಳ್ಯ,ಅ.15(DaijiworldNews/TA):ರಿಫ್ರೆಶ್ ಮೆಂಟ್ ಅಂಡ್ ಕೂಲ್ ಜೋನ್ ಎಂಬ ಅಂಗಡಿಯೊಂದರಲ್ಲಿ ಅಕ್ರಮ ವೈನ್ ಸಂಗ್ರಹ ಪತ್ತೆಯಾಗಿದ್ದು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅರಂತೋಡು ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳು ಗಸ್ತು ನಡೆಸುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ದೊರೆತ ಖಚಿತ ಮಾಹಿತಿ ಮೇರೆಗೆ ಅಂಗಡಿಯೊಂದಕ್ಕೆ ದಾಳಿ ನಡೆಸಿದಾಗ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವೈನ್ ಪತ್ತೆಯಾಗಿದೆ.
ಗೂನಡ್ಕ ಪ್ರದೇಶದ ಪಯಶ್ವಿನಿ ರಿಫ್ರೆಶ್ ಮೆಂಟ್ ಅಂಡ್ ಕೂಲ್ ಜೋನ್ ಅಂಗಡಿಯಲ್ಲಿ ಒಟ್ಟು 111. 750 ಲೀಟರ್ ಕೂರ್ಗ್ ವಿಂಟೇಜ್ ಹೋಮ್ ಮೇಡ್ ವೈನ್ ಸಂಗ್ರಹ ಇಟ್ಟಿರುವುದು ಕಂಡುಬಂದಿದೆ. ಅಂಗಡಿ ಮಾಲೀಕ ಮುರಾರಿ ವಿರುದ್ಧ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸಲಾಗುತ್ತಿದೆ.