ಕುಂದಾಪುರ,ಅ.15(DaijiworldNews/AK): ಹೆಮ್ಮಾಡಿ ನಿವಾಸಿ ಮರಿನಾ ಡಿ’ಸಿಲ್ವಾ (42ವ) ಅ.14ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಕುಂದಾಪುರದ ಓಯಾಸಿಸ್ ಎಲೆಕ್ಟ್ರಾನಿಕ್ ಮಾಲಕರಾದ ಲಾಯ್ಡ್ ಡಿ’ಸಿಲ್ವಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಅ.16 ಸಂಜೆ 4 ಗಂಟೆಗೆ ತಲ್ಲೂರಿನ ಸಂತ ಫ್ರಾನ್ಸಿಸ್ ಆಸಿಸಿ ಚರ್ಚ್ನಲ್ಲಿ ನಡೆಯಲಿದೆ. ಮರೀನಾ ತಮ್ಮ ಯುವ ಪ್ರಾಯದಲ್ಲೇ ತಮ್ಮ ಒಂದು ಕಿಡ್ನಿಯನ್ನು ತನ್ನ ತಮ್ಮನಿಗೆ ದಾನ ನೀಡಿದವರು. ಕೆಲವು ವರ್ಷಗಳ ಹಿಂದೆ ಡಾನ್ ಬಾಸ್ಕೊ ಶಾಲೆಯ ವಿದ್ಯಾಥಿಗಳು ಶಾಲೆಗೆ ತೆರಳುತ್ತಿರುವ ಖಾಸಗಿ ಸ್ಕೂಲ್ ಬಸ್ಸಿನ ಭೀಕರ ಅಪಘಾತದಲ್ಲಿ ಅವರು ಎರಡು ಚಿಕ್ಕ ಮಕ್ಕಳನ್ನು ಕಳೆದುಕೊಂಡ ಮರೀನಾ. ನಂತರ ಎರಡು ಮಕ್ಕಳಿಗೆ ಜನ್ಮ ಕೊಟ್ಟರು. ನಂತರ ಕಾನ್ಸರ್ ಕಾಯಿಲೆಗೆ ತುತ್ತಾಗಿ ಪುನರ್ಜೀವನ ಪಡೆದವರು. ಈಕೆ ಈಗ ಸ್ವಲ್ಪ ದಿನಗಳ ಅಸ್ವಸ್ಥತೆಯಿಂದ ನಿಧನರಾಗಿದ್ದಾರೆ.