ಮಂಗಳೂರು,ಜೂ02(DaijiworldNews/AZM):ಜಿಂದಾಲ್ ಕಂಪೆನಿಗೆ 3666 ಎಕ್ರೆ ಭೂಮಿ ಮಾರಾಟ ಮಾಡಲಾಗಿದೆ. ಪುಡಿಗಾಸಿಗೆ ಭೂಮಿಯನ್ನು ಮಾರಾಟ ಮಾಡುವ ಅಗತ್ಯವಾದರೂ ಏನಿತ್ತು. ರಾಜ್ಯದಲ್ಲಿ ಜಿಂದಾಲ್ ಕಂಪನಿ 1500 ಕೋಟಿ ರೂ. ಬಾಕಿ ಇರಿಸಿಕೊಂಡಿದೆ. ಐದಾರು ಸಾವಿರ ಕೋಟಿ ಮೌಲ್ಯದ ಭೂಮಿಯನ್ನ 35 ಕೋಟಿಗೆ ಮಾರುತ್ತಿದ್ದಾರೆ.ಪ್ರಕರಣದಲ್ಲಿ ಸಚಿವ ಸಂಪುಟದ ಮೇಲೆ ಗಂಭೀರ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ ಎಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಕೆ ಪಾಟೀಲ್, ಇದು ಆತಂಕಕಾರಿ ಬೆಳವಣಿಗೆ ಎಂದು ಸಿಎಂಗೆ ಪತ್ರ ಬರೆದಿದ್ದಾರೆ. ಆದರೆ ಕುಮಾರಸ್ವಾಮಿ ಪತ್ರವನ್ನು ಕಡೆಗಣಿಸಿ ಮೊಂಡುತನ ಪ್ರದರ್ಶನ ಮಾಡ್ತಿದಾರೆ ಇದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದ್ದು ತಕ್ಷಣ ರದ್ದುಪಡಿಸಬೇಕು. ಭೂಮಿ ಲೀಸ್ ಕೊಡುವುದಕ್ಕೆ ಅವಕಾಶ ಇದೆ, ಮಾರಾಟ ಮಾಡಬೇಕಿಲ್ಲ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಕೈಗೊಳ್ತೀವಿ ಎಂದರು. ಇನ್ನು ರಾಜ್ಯದಲ್ಲಿ 109 ನಗರಾಡಳಿತ ಸಂಸ್ಥೆ ಚುನಾವಣೆ ಮುಗಿದು ೮ ತಿಂಗಳು ಕಳೆದರೂ ಅಧ್ಯಕ್ಷ ಉಪಾಧ್ಯಕ್ಷ ರ ಚುನಾವಣೆಯಾಗಿಲ್ಲ. ಸರಕಾರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದೆ...ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನ್ಯಾಯಾಲಯ ಕ್ಕೆ ಮನವರಿಕೆ ಮಾಡಲು ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಇನ್ನು ಕರುನಾಡಿನಲ್ಲಿ ಮಳೆ ಇಲ್ಲದೆ ಬರ ನಾಡು ಆಗುತ್ತಿದೆ. ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ.ಸಿಎಂ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕುಮಾರ ಸ್ವಾಮಿ ಕುರ್ಚಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.