ಮಂಗಳೂರು,ಅ.12(DaijiworldNews/TA):ಬೆಂಗಳೂರಿನ ಪ್ಯಾರಾ ರೆಜಿಮೆಂಟ್ ನ ನಿವೃತ್ತ ಕರ್ನಲ್ ರತ್ನ ಕುಮಾರ್ ಅಡಪರವರು (61) ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಮೂಲತಃ ಸೋಮವಾರ ಪೇಟೆಯವರಾಗಿದ್ದ ಇವರು ದಿ॥ಕೆ.ರಘರಾಮ ಅಡಪರವರ ಪುತ್ರ, ಶನಿವಾರದಂದು ಬೆಂಗಳೂರಿನಲ್ಲಿ ದೈವಾಧೀನರಾದ ನಿವೃತ್ತ ಕರ್ನಲ್ ರತ್ನ ಕುಮಾರ್ ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
ನಾಳೆ ಬೆಳಗ್ಗೆ 10 ಗಂಟೆಗೆ ಪದವು ಮೇಗಿನ ಮನೆಯ ಬಳಿ ಇರುವ ಅವರ ಸ್ವಗೃಹವಾದ "ಅರ್ಪಣಾ" ನಿವಾಸದಲ್ಲಿ ಮೃತರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು. ನಂತರ ಶಕ್ತಿನಗರದ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರವನ್ನು ಮಾಡಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ.