ಮಂಗಳೂರು, ಅ.08(DaijiworldNews/AA): ಮಂಗಳೂರಿನ ಶರಧಿ ಪ್ರತಿಷ್ಠಾನ ವತಿಯಿಂದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಸಹಭಾಗಿತ್ವದಲ್ಲಿ ಮುದ್ದುಶಾರದೆ ನವದುರ್ಗೆ ವೇಷ ಸ್ಪರ್ಧೆ ಭಾನುವಾರ ನಡೆಯಿತು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುದ್ರೋಳಿ ಗೋಕರ್ಣ ಕ್ಷೇತ್ರದ ಖಜಾಂಚಿ ಪಿ. ಪದ್ಮರಾಜ್ ಪೂಜಾರಿ ಶರಧಿ ಪ್ರತಿಷ್ಠಾನದವರು ದಸರಾ ಸಂದರ್ಭದಲ್ಲಿ ಮುದ್ದು ಶಾರದೆ ಮತ್ತು ನವದುರ್ಗೆ ವೇಷ ಸ್ಪರ್ಧೆಯನ್ನು ಆಯೋಜಿಸಿರುವುದು ಉತ್ತಮ ಪರಿಕಲ್ಪನೆ. ದಸರಾ ಸಂದರ್ಭ ಕುದ್ರೋಳಿ ಕ್ಷೇತ್ರದ ವತಿಯಿಂದಲೇ ನವದುರ್ಗ ವೇಷ ಸ್ಪರ್ಧೆಯೊಂದನ್ನು ಆಯೋಜಿಸುವ ಚಿಂತನೆಯಿತ್ತು. ಅದೇ ವೇಳೆ ಶರಧಿ ಪ್ರತಿಷ್ಠಾನದ ಪುನೀಕ್ ಶೆಟ್ಟಿ, ಮುದ್ದು ಶಾರದೆ, ನವದುರ್ಗೆ ವೇಷ ಸ್ಪರ್ಧೆ ಆಯೋಜಿಸಲು ಸಹಕಾರ ಕೇಳಿ ಮುಂದೆ ಬಂದರು. ಉತ್ತಮ ಚಿಂತನೆ, ಕಾರ್ಯಕ್ಕೆ ಬೆಂಬಲ ಒದಗಿಸುವುದು ಕರ್ತವ್ಯ ಹೀಗಾಗಿ ಅವರಿಗೆ ಸಹಕಾರ ಒದಗಿಸಿದ್ದೇವೆ ಎಂದರು.
ಕುದ್ರೋಳಿ ಕ್ಷೇತ್ರದ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆಯುವ ದಸರಾದಲ್ಲಿ ಹೊಸತನ ಪರಿಚಯಿಸುವ ಕೆಲಸ ನಡೆಯುತ್ತಿದೆ. ಇಂದು ದಸರಾ ಮ್ಯಾರಥಾನ್ ನಡೆದಿದ್ದು, ಸುಮಾರು ಸಾವಿರಕ್ಕೂ ಅಧಿಕ ಜನರು ರಾಜ್ಯ ಹೊರರಾಜ್ಯದಿಂದ ಬಂದಿರುವುದು ಹೆಮ್ಮೆ ತಂದಿದೆ ಎಂದರು. ಹೋಟೆಲ್ ಉದ್ಯಮಿ ರಮೇಶ್ ನಾಯಕ್ ಮಾತನಾಡಿ ಶರಧಿ ಪ್ರತಿಷ್ಠಾನದವರು ಉತ್ತಮ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿದ್ದಾರೆ. ನಿಷ್ಕಲ್ಮಶ ಮನಸ್ಸಿನ ಕಾರ್ಯಕ್ಕೆ ಯಾವಾಗಲೂ ಜಯವಿದೆ. ಮುದ್ದುಮಕ್ಕಳಲ್ಲಿ ದೇವಿಯ ಪ್ರತಿರೂಪ ಮುದ್ದುಶಾರದೆಯನ್ನು ಕಾಣುವುದಕ್ಕೆ ಬಲು ಆನಂದವಾಗುತ್ತದೆ ಎಂದು ಹೇಳಿದರು.
ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ, ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈ ಮಾತನಾಡಿ, ಮುದ್ದುಶಾರದೆ, ನವದುರ್ಗೆ ವೇಷ ಸ್ಪರ್ಧೆ ನಮ್ಮ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಉತ್ತಮ ಕರ್ಯಕ್ರಮ ಎಂದು ತಿಳಿಸಿದರು.
ಕುದ್ರೋಳಿ ಕ್ಷೇತ್ರದ ರೂವಾರಿ ಬಿ.ಜನಾರ್ದನ ಪೂಜಾರಿ ವೇದಿಕೆಗೆ ಆಗಮಿಸಿ ಚಿಣ್ಣರೊಂದಿಗೆ ಬೆರೆತು, ಮುದ್ದುಶಾರದೆ, ನವದುರ್ಗೆ ವೇಷ ಸ್ಪರ್ಧಿಗಳಿಗೆ ದೇವರು ಒಳಿತು ಮಾಡಲಿ ಎಂದು ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮೊದಲಾದವರು ಇದ್ದರು.
ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯ ವಿಜೇತರ ಹೆಸರು ಈ ಕೆಳಗಿನಂತಿವೆ:
ವಿಭಾಗ 1: 1 ರಿಂದ 2 ವರ್ಷ
ಪ್ರಥಮ- ಶಾನ್ವಿ ವಿ ಶೆಟ್ಟಿ
ದ್ವಿತೀಯ- ವರುಣವಿ
ತೃತೀಯ- ಶಾನ್ಯಾ ಎಸ್ ಕೋಟ್ಯಾನ್
ವಿಭಾಗ 2: 2 ರಿಂದ 4 ವರ್ಷ
ಪ್ರಥಮ- ಯಶ್ಮಿ ಸಂದೀಪ್
ದ್ವಿತೀಯ- ರಾಹಿತ್ಯಾ ಬಿ ಶೆಟ್ಟಿ
ತೃತೀಯ- ಶ್ರಿಯಾ ಕೆ ಕಾಂಚನ್ ಮತ್ತು ಖ್ಯಾತಿ ಪ್ರಮಿತ್ ಕುಲಾಲ್
ವಿಭಾಗ 3: 4 ರಿಂದ 6 ವರ್ಷ
ಪ್ರಥಮ- ಆದ್ಯ ವಿ ಕೋಟ್ಯಾನ್ ಮತ್ತು ಲಾಸ್ಯ ಪೂಜಾರಿ
ದ್ವಿತೀಯ- ಜೋಶ್ನಿ ನಾಯಕ್ ಮತ್ತು ತನ್ವಿ ನಾಯಕ್
ತೃತೀಯ- ಹೆಚ್ ದಿವಿಶಾ ನಾಯಕ್ ಮತ್ತು ಆರುಷಿ ಆರ್ ಅಮೀನ್
ವಿಭಾಗ 4: 8 ರಿಂದ 10 ವರ್ಷ
ಪ್ರಥಮ- ಕಾಶ್ವಿ
ದ್ವಿತೀಯ- ಪ್ರಾಪ್ತಿ ಪೂಜಾರಿ ಮತ್ತು ಶಾನ್ಯ ಬಿ ಸುವರ್ಣ
ತೃತೀಯ- ತನಿಷ್ಕಾ ಕೆ ಬಂಗೇರ ಮತ್ತು ದಿಯಾ ಡಿ
ವಿಭಾಗ 5: 10 ರಿಂದ 12 ವರ್ಷ
ಪ್ರಥಮ- ಮಾನ್ವಿ ಆರ್
ದ್ವಿತೀಯ- ಪಿಯಾಲಿ ಎಸ್ಪಿ ಮತ್ತು ಪ್ರಧಾನ್ಯ ಎಸ್
ತೃತೀಯ- ದಿಯಾ ಎಸ್ಪಿ
ವಿಭಾಗ 6: 13 ರಿಂದ 15 ವರ್ಷ
ಪ್ರಥಮ- ಪಾಪ್ತಿ ಎಲ್ ಕೋಟ್ಯಾನ್
ದ್ವಿತೀಯ- ಯಶಿಕಾ ಡಿಂಪಲ್
ತೃತೀಯ- ಪ್ರಥಮ್ಯ ಯು ವೈ