ಮಂಗಳೂರು, ಅ.07(DaijiworldNews/AK):ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆಯುವ ಉಪಚುನಾವಣೆಗೆ ನಾಲ್ಕು ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಮುಹಮ್ಮದ್ ರಿಯಾಝ್ (ಪಕ್ಷೇತರ) ಅವರು ತಮ್ಮ ನಾಮಪತ್ರವನ್ನು ಹಿಂಪಡೆದಿರುತ್ತಾರೆ. ಅಂತಿಮವಾಗಿ ಕಿಶೋರ್ ಬಿ.ಆರ್ (ಭಾರತೀಯ ಜನತಾ ಪಾರ್ಟಿ), ರಾಜು ಪೂಜಾರಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಅನ್ವರ್ ಸಾದತ್ ಎಸ್. (ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ಮತ್ತು ದಿನಕರ ಉಳ್ಳಾಲ್ (ಪಕ್ಷೇತರ) ಅವರು ಕಣದಲ್ಲಿದ್ದಾರೆ ಚುನಾವಣೆಯು ಅಕ್ಟೋಬರ್ 21 ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.