ಮಂಗಳೂರು,ಜೂ 01 (Daijiworld News/MSP): ವಿದ್ಯಾರ್ಥಿಗಳ ಸುರಕ್ಷತೆಗೆ ಸುಪ್ರೀಂ ಕೋರ್ಟ್ ಸೂಚಿಸಿರುವ ಮಾರ್ಗಸೂಚಿ ಅಂಶಗಳನ್ನು ಕಡ್ಡಾಯವಾಗಿ ಶಾಲಾ ವಾಹನಗಳು ಪಾಲಿಸುವಂತೆ ಜೂನ್ 1 ರ ಶನಿವಾರ ಪೊಲೀಸ್ ಇಲಾಖೆಯೂ ನಗರದ ಹಲವು ಶಾಲೆಗಳ ಆಡಳಿತ ಮಂಡಳಿ, ಶಿಕ್ಷಣ ಇಲಾಖೆ ಸಾರಿಗೆ ಇಲಾಖೆ , ಟಾಕ್ಸಿ ಅಸೋಸಿಯೇಶನ್ ಹಾಗೂ ಬಸ್ ಅಸೋಸಿಯೇಶನ್ ನೊಂದಿಗೆ ಪೊಲೀಸ್ ಇಲಾಖೆ ನಗರ ಪೊಲೀಸ್ ಇಲಾಖೆ ಸಭಾಂಗಣದಲ್ಲಿ ಸಭೆ ನಡೆಸಿತು.
ಪ್ರತಿಯೊಂದು ಶಾಲೆ, ಶಿಕ್ಷಣ ಸಂಸ್ಥೆಗಳು ಅವರದ್ದೇ ಮಾಲೀಕತ್ವದ ಸ್ವಂತ ವಾಹನಗಳನ್ನು ಹೊಂದಿದ್ದರೆ ಸುಪ್ರೀಂ ಕೋರ್ಟ್ ನಿರ್ದೇಶನದ ಮಾರ್ಗಸೂಚಿಗಳನ್ನು ಪಾಲಿಸಬೇಕು ಮತ್ತು ಖಾಸಗಿಯವರೊಂದಿಗೆ ಒಪ್ಪಂದ ಮಾಡಿಕೊಂಡು ವಾಹನಗಳನ್ನು ಬಳಕೆ ಮಾಡುತ್ತಿರುವವರು ರಾಜ್ಯ ಸರಕಾರದ ನಿಯಮಾವಳಿಗಳನ್ನು ಪಾಲನೆ ಮಾಡಬೇಕು ಎಂದು ಸೂಚಿಸಿದ ಇಲಾಖೆ ಶಾಲಾ ವಾಹನ ಸುರಕ್ಷತೆ ಕೈಗೊಳ್ಳುವುದು ಹೇಗೆ? ಅವುಗಳ ನಿರ್ವಹಣೆ ಹೇಗೆ? ಒಂದು ವಾಹನದಲ್ಲಿ ಎಷ್ಟು ಮಕ್ಕಳನ್ನು ಕರೆದೊಯ್ಯಬೇಕು? ಯಾವ ಯಾವ ಭದ್ರತಾ ಕಾರ್ಯಗಳನ್ನು ಅನುಸರಿಸಬೇಕು ಮತ್ತು ಸಂಚಾರ ನಿಯಮ ಪಾಲನೆ ಹೇಗೆ? ಅನುಭವಿ ಚಾಲಕನನ್ನೇ ನೇಮಕ ಮಾಡಬೇಕು ಎಂಬಿತ್ಯಾದಿ ಅಂಶಗಳ ಕುರಿತು ಮಾಹಿತಿ ನೀಡಿತು. ಇದೇ ಸಂದರ್ಭ ಸಂಚಾರ ನಿಯಮ ಹಾಗೂ ಅಪರಾಧ ಪ್ರಕರಣಗಳ ತಡೆಗೆ ಜಾಗೃತಿ ಮೂಡಿಸಲಾಯಿತು.
ನಿಯಮ ಪಾಲಿಸದೆ ಶಾಲಾ ಮಕ್ಕಳನ್ನು ಮಿತಿ ಮೀರಿ ಮಕ್ಕಳನ್ನು ತುಂಬಿಕೊಂಡು ಅಸುರಕ್ಷಿತವಾಗಿ ಕರೆದೊಯ್ಯುವುದು ಕಂಡುಬಂದರೆ ಅಂಥವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಪೊಲೀಸ್ ಇಲಾಖೆ ಎಚ್ಚರಿಸಿತು.