ಕುಂದಾಪುರ,ಅ. 03(DaijiworldNews/AK): ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಜನ ವಿರೋಧಿಯಾಗಿದೆ. ಕೇಂದ್ರ ಸರಕಾರ ಈಗ 6ನೇ ಭಾರಿಗೆ ಅಧಿಸೂಚನೆ ನೀಡಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜನವಸತಿ ಪ್ರದೇಶವನ್ನು ವರದಿಯಿಂದ ದೂರ ಇಟ್ಟು, ದಟ್ಟಕಾಡನ್ನು ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ಇಲ್ಲ. ಭೂ ಸರ್ವೇ ಮೂಲಕ ಜನರಲ್ಲಿರುವ ಆತಂಕವನ್ನು ದೂರ ಮಾಡಬೇಕು. ಜನರಿಗೆ ಇರುವ ಆತಂಕವನ್ನು ದೂರ ಮಾಡಲು ಎಲ್ಲಾ ಜನಪ್ರತಿನಿಧಿಗಳು ಸೇರಿ ಈ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಅಮಾಸೆಬೈಲು ಮತ್ತು ಮಚ್ಚಟ್ಟು ಗ್ರಾಮಸ್ಥರ ಹಿತರಕ್ಷಣಾ ಸಮಿತಿ ನೇತ್ರತ್ವದಲ್ಲಿ ಅ.3ರಂದು ಅಮಾಸೆಬೈಲು ಶ್ರೀ ಮಹಾಭೆೃರವಿ ದುರ್ಗಾಪರಮೇಶ್ವರಿ ದೇವಸ್ಥಾನ ವಠಾರದಲ್ಲಿ ಬೃಹತ್ ಪ್ರತಿಭಟನೆ ಸಭೆ ಉದ್ದೇಶಿಸಿ ಮಾತನಾಡಿದರು.
ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ಜನರ ಜೀವನಕ್ಕೆ ಮಾರಕವಾಗಿದೆ. ಅಂದಿನ ಕೇಂದ್ರ ಸರಕಾರ ಪರಿಸರ ಸಂರಕ್ಷಣೆ ಉದ್ದೇಶದಿಂದ ಮಾಧವ ಗಾಡ್ಗಿಲ್ ಸಮಿತಿ ರಚಿಸಿ, ವರದಿ ಸಿದ್ದವಪಡಿಸಿತ್ತು. ಈ ವರದಿಯಲ್ಲಿ ಸಾಕಷ್ಟು ನ್ಯೂನತೆಗಳು ಮತ್ತು ಅವೈಜ್ಞಾನಿಕತೆಯಿಂದ ಕೂಡಿರುವುದರಿಂದ ಪುನಃ ಕಸ್ತೂರಿ ರಂಗನ್ ಸಮಿತಿ ರಚಿಸಿ ವರದಿ ಸಿದ್ದಪಡಿಸುತ್ತದೆ. ಕಸ್ತೂರಿ ರಂಗನ್ ಸಮಿತಿ ನೀಡಿದ ವರದಿಯನ್ನು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ನೀಡುತ್ತದೆ. ಪರಿಸರ ಸಂರಕ್ಷಣೆ ಉದ್ದೇಶದಿಂದ ಸುಪ್ರೀಂ ನಿರ್ದೇಶನದಂತೆ ಕಸ್ತೂರಿ ರಂಗನ್ ವರದಿ ಜಾರಿ ಮಾಡಿ, 6ನೇ ಅಧಿಸೂಚನೆ ನೀಡಿದೆ. ಅಧಿಸೂಚನೆಯಿಂದ ಇಂದು ಜನ ಎಚ್ಚೇತುಕೊಂಡು ಹೋರಾಟಕ್ಕೆ ಮುಂದಾಗಿದ್ದಾರೆ. ಇದಕ್ಕೆ ಜನಪ್ರತಿನಿಧಿಗಳ ಬೆಂಬಲ ಇದೆ ಎಂದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯ ಬಗ್ಗೆ ಹಿಂದೆ ಶಾಸಕನಾಗಿದ್ದಾಗ ವಿರೂಧ ಮಾಡಿದ್ದೇವೆ. ಗ್ರಾ.ಪಂ. ನೀರ್ಣಯದ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದೇವೆ. ಉಡುಪಿ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಹಿಂದೆ ನಡೆದ ಸಭೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ನಾನು ವಿರೂಧ ಮಾಡಿದ್ದೇವೆ. ಆದರೂ ವರದಿ ಜಾರಿಯಾಗಿ, 6ನೇ ಭಾರೀಗೆ ಅಧಿಸೂಚನೆ ಬಂದಿದೆ. ಈಗ ಜನ ಎಚ್ಚೇತುಕೊಂಡು ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ವಿರೋಧಿಸಿ ಹಲವು ಭಾಗಗಳಲ್ಲಿ ಪ್ರತಿಭಟಿಸಿದ್ದಾರೆ. ವರದಿಯಿಂದ ಜನತೆಗೆ ಆಗಬಹುದಾ ಸಾಧಕ ಭಾದಕಗಳ ಕುರಿತು ಅರಣ್ಯ ಸಚಿವರ ಹಾಗೂ ರಾಜ್ಯ ಸರಕಾರದ ಗಮನಕ್ಕೆ ತರಲಾಗಿದೆ. ಕಸ್ತೂರಿ ರಂಗನ್ ವರದಿ ಜಾರಿಯನ್ನು ತಿರಸ್ಕರಿಸಿ, ರಾಜ್ಯ ಸರಕಾರ ಸಂಪುಟ ನೀರ್ಣಯ ಕೈಗೊಂಡಿದೆ. ವರದಿ ಜಾರಿ ತಡೆಯಲು ಒಗ್ಗಟ್ಟಿನ ಹೋರಾಟದ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯ ಬೇಕಾಗಿದೆ ಎಂದರು.
ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನ ವಿರೋಧಿ ವರದಿ ಜಾರಿಗೆ ತನ್ನ ವಿರೋಧ ಇದೆ. ಸರಕಾರದ ಯಾವುದೇ ಅಧಿಸೂಚನೆಗಳು ಜನ ವಿರೋಧಿಯಾಗಿರ ಬಾರದು. ಕಸ್ತೂರಿ ರಂಗನ್ ವರದಿಯಿಂದ ಜನರಿಗಾಗುವ ತೊಂದರೆಯ ವಿರುದ್ಧ ಹೋರಾಡುವ ಜನಪ್ರತಿನಿಧಿಗಳಿಗೆ ತನ್ನ ಸಂಪೂರ್ಣ ಬೆಂಬಲ ಇದೆ ಎಂದರು.