ಕಾಸರಗೋಡು, ಅ.01(DaijiworldNews/AA): ಮೀನು ಹಿಡಿಯಲು ತೆರಳಿದ್ದ ಯುವಕ ನೀರುಪಾಲಾದ ಘಟನೆ ಕುಂಬಳೆ ಪೆರುವಾಡ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಪೆರುವಾಡ್ ಕಡಪ್ಪುರ ಫಿಶರಿಸ್ ಕಾಲನಿಯ ಹರ್ಷಾದ್ (19) ನಾಪತ್ತೆಯಾದವರು.
ಹರ್ಷಾದ್ ಅವರು ಪೆರುವಾಡ್ ಸಮುದ್ರ ತೀರದಲ್ಲಿ ಬಲೆ ಬೀಸಿ ಮೀನು ಹಿಡಿಯಲೆತ್ನಿಸಿದಾಗ ಅಲೆಯ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾನೆ. ಇದೀಗ ನಾಪತ್ತೆಯಾದವರಿಗಾಗಿ ಪೊಲೀಸ್, ಅಗ್ನಿಶಾಮಕ ದಳ ಹಾಗೂ ನಾಗರಿಕರು ಶೋಧ ಆರಂಭಿಸಿದ್ದಾರೆ.