ಮೂಡುಬಿದಿರೆ, ಅ.01(DaijiworldNews/AK): ಪುರಸಭೆ ಮಾರುಕಟ್ಟೆ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ಸೆ.27ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಪುರಸಭೆ ವತಿಯಿಂದ ಮೂರು ವಾರಗಳಲ್ಲಿ ಅನುಮತಿ ಕೋರಿ ಅರ್ಜಿ ಸಲ್ಲಿಸಲು ಹಾಗೂ ನಾಲ್ಕು ವಾರಗಳಲ್ಲಿ ಸದ್ರಿ ಇಲಾಖೆಯು ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ನಿರಾಕ್ಷೇಪಣೆ ಪತ್ರ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಪುರಸಭೆಯ ದಿನವಹಿ ಮಾರುಕಟ್ಟೆಯು ಹಲವು ವರ್ಷಗಳ ಹಳೆಯ ಕಟ್ಟಡವಾಗಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಸುಮಾರು 26ಕೋಟಿ ಅಂದಾಜು ಮೊತ್ತದ ಹೈಟೆಕ್ ಮಾರುಕಟ್ಟೆಯನ್ನು ಖಾಸಗಿ ಸಂಸ್ಥೆಯ ಸಹಬಾಗಿತ್ವದಲ್ಲಿ ಕಟ್ಟಡ ನಿರ್ಮಿಸಲು ಕೆಯುಐಡಿಎಫ್ಸಿ ಮೂಲಕ ಟೆಂಡರ್ ಕರೆಯಲಾಗಿತ್ತು. ಕಟ್ಟಡದ ಕಾಮಗಾರಿಯ ಶೇ.70 ಪೂರ್ಣಗೊಂಡಿದ್ದು ಕಾಮಗಾರಿಯು ನಡೆಯುತ್ತಿದ್ದಂತೆ ಪುರಾತತ್ವ ಇಲಾಖೆಯಿಂದ ನಿರಾಕ್ಷೇಪಣೆ ಪಡೆಯದಿರುವುದರಿಂದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಕೆಯಾದ ಪರಿಣಾಮ ಕಟ್ಟಡ ಕಾಮಗಾರಿಗೆ ಮಾನ್ಯ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು.
ಈ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ಸೆ.27ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಪುರಸಭೆ ವತಿಯಿಂದ ಮೂರು ವಾರಗಳಲ್ಲಿ ಅನುಮತಿ ಕೋರಿ ಅರ್ಜಿ ಸಲ್ಲಿಸಲು ಹಾಗೂ ನಾಲ್ಕು ವಾರಗಳಲ್ಲಿ ಸದ್ರಿ ಇಲಾಖೆಯು ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ನಿರಾಕ್ಷೇಪಣೆ ಪತ್ರ ನೀಡುವಂತೆ ಮಾನ್ಯ ನ್ಯಾಯಾಲಯ ನಿರ್ದೇಶಿಸಿದೆ.
ಉದ್ದೇಶಿತ ಕಟ್ಟಡವು ಘೋಷಿತ ಸ್ಮಾರಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಆದ್ದರಿಂದ ವಿಶೇಷ ಪ್ರಕರಣವಾಗಿ ಅನುಮತಿ ನೀಡಲು ತಮ್ಮ ಅಭ್ಯಂತರವಿಲ್ಲ ಎಂದು INTACH ನ ವರದಿಯಲ್ಲಿ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರವು ನ್ಯಾಯಾಲಯದ ಮುಂದೆ ಮೆಮೊ ಸಲ್ಲಿಸಿರುವುದನ್ನು ನೀವು ನೆನಪಿಸಿಕೊಳ್ಳಬಹುದು.
ಗೌರವಾನ್ವಿತ ನ್ಯಾಯಾಲಯವು ಜ್ಞಾಪಕ ಪತ್ರವನ್ನು ಅಂಗೀಕರಿಸಿದೆ ಮತ್ತು ನಿರ್ಮಾಣಕ್ಕೆ ಯಾವುದೇ ಆಕ್ಷೇಪಣೆಯಿಲ್ಲ ಎಂದು ಪ್ರಾಧಿಕಾರವು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಪ್ರಾಧಿಕಾರವು ಅನುಮತಿ ನೀಡುವ ನಿರೀಕ್ಷೆಯಿದೆ. W.P.No.51844/2019 ಮತ್ತು W.P. ಸಂ.31676/2017 ಈ ನಿರ್ದೇನದೊಂದಿಗೆ ವಿಲೇವಾರಿ ಮಾಡಲಾಗಿದೆ.