ಕಾಸರಗೋಡು, ಸೆ.30(DaijiworldNews/AK): ಮನೆಗಳಿಗೆ ನುಗ್ಗಿ ಚಿನ್ನಾಭರಣ, ಅಡಿಕೆ ಹಾಗೂ ಇತರ ಸಾಮಾಗ್ರಿಗಳನ್ನು ಕಳವು ಗೈದ ಘಟನೆಗೆ ಸಂಬಂಧಪಟ್ಟಂತೆ ಆರೋಪಿ ಯ ಕುಂಬಳೆ ಠಾಣಾ ಪೊಲೀಸರು ಬಂಧಿಸಿ ದ್ದಾರೆ. ವಿಟ್ಲ ಸಾಲೆತ್ತೂರಿನ ಮುಹಮ್ಮದ್ ಜಾಬಿರ್ (37) ಬಂಧಿತರು. ಆಗಸ್ಟ್ ಮೂರರಂದು ರಾತ್ರಿ ಮಣಿಯಂಪಾರೆಯ ಫಾತಿಮ್ಮತ್ ಸುಮೈನಾ ರವರ ಮನೆಯ ಬಾಗಿಲು ಮುರಿದು ಒಳನುಗ್ಗಿ ಕಳವು ನಡೆಸಿದ್ದನು.
ನಾಲ್ಕೂವರೆ ಕ್ವಿಂಟಾಲ್ ಅಡಿಕೆ, ಟಿ ವಿ ,ಕ್ಯಾಮರಾ, ಟ್ಯಾಬ್ ಹಾಗೂ ಇತರ ಸಾಮಾಗ್ರಿ ಗಳನ್ನು ಕಳವು ಮಾಡಲಾಗಿತ್ತು. ಇದಲ್ಲದೆ ನೆಕ್ರಾಜೆ ಚೇಡಿಕ್ಕಾನ ದ ನಬೀಸಾ ರವರ ಮನೆಯಿಂದ 15 ಪವನ್ ಚಿನ್ನಾಭರಣ. ಕಳವು ಗೈದ ಪ್ರಕರಣ ದ ಈತ ಶಾಮಿಲಾಗಿದ್ದ ಎಂದು ತನಿಖೆ ಯಿಂದ ತಿಳಿದು ಬಂದಿದೆ.
ನಬೀಸಾ ಹಾಗೂ ಮಕ್ಕಳು ಕಾಸರಗೋಡಿನ ಸಂಬಂಧಿಕರ ಮನೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ಕಪಾಟಿ ನಲ್ಲಿ ರಿಸಲಾಗಿದ್ದ ಚಿನ್ನಾಭರಣ ಕಳವು ಮಾಡಲಾಗಿತ್ತು.ಈತನ ಜೊತೆ ಇನ್ನಿಬ್ಬರು ಶಾಮಿಲಾಗಿರುವುದಾಗಿ ತನಿಖೆ ಯಿಂದ ತಿಳಿದು ಬಂದಿದೆ