ಮಂಗಳೂರು, ಸೆ.29(DaijiworldNews/AA): ಮಂಗಳೂರು ಮತ್ತು ಅದರ ಸುತ್ತಮುತ್ತಲಿನ 300 ಚೋಟಾನಾಗ್ಪುರ್ ವಲಸೆ ಆದಿವಾಸಿಗಳು ತಮ್ಮ ಪಾರಂಪರಿಕ ಕರಮ್ ಹಬ್ಬವನ್ನು ಡಿವೈನ್ ಕಾಲ್ ರಿಟ್ರೀಟ್ ಸೆಂಟರ್, ಕಾರ್ನಾಡ್ ಮುಲ್ಕಿಯಲ್ಲಿ ಆಚರಿಸಿ ಸಂಭ್ರಮಿಸಿದರು.
ಚೋಟಾನಾಗ್ಪುರ್ ವಲಸೆ ಆದಿವಾಸಿಗಳು ತಮ್ಮ ಪಾರಂಪರಿಕ ಕರಮ್ ಹಬ್ಬವನ್ನು ಹೆಮ್ಮೆಯಿಂದ, ನೃತ್ಯ, ಹಾಡು ಮತ್ತು ಆದಿವಾಸಿ ಸಂಪ್ರದಾಯಗಳೊಂದಿಗೆ ಸಂಭ್ರಮಿಸಿದರು.
ಅನೇಕ ಚೋಟಾನಾಗ್ಪುರ್ ಆದಿವಾಸಿ ವಲಸಿಗರು ಕಾರ್ಖಾನೆಗಳು, ಕೈಗಾರಿಕೆಗಳು, ಆಸ್ಪತ್ರೆಗಳು, ಕೃಷಿ ಮತ್ತು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಉತ್ತಮ ಜೀವನೋಪಾಯವನ್ನು ಹುಡುಕಲು ಮತ್ತು ಚೋಟಾನಾಗ್ಪುರ್ ಪ್ರದೇಶದ ಕಠಿಣ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಅವರು ಬಂದು, ಅವರಲ್ಲಿ ಕೆಲವರು ಕುಟುಂಬಗಳೊಂದಿಗೆ ಚೆನ್ನಾಗಿ ನೆಲಸಿದ್ದಾರೆ. ಇನ್ನು ಚೋಟಾನಾಗ್ಪುರ್ ಆದಿವಾಸಿ ವಲಸಿಗರ ಮಕ್ಕಳು ಚೆನ್ನಾಗಿ ವಿದ್ಯಾವಂತರಾಗಿದ್ದಾರೆ ಮತ್ತು ಉತ್ತಮ ಉದ್ಯೋಗದಲ್ಲಿ ನೆಲೆಸಿದ್ದಾರೆ.
ಕರಮ್ ಹಬ್ಬವು ಬಣ್ಣಬೆರಗಿನ ಮತ್ತು ಅದ್ಭುತವಾಗಿತ್ತು. ಡಿವೈನ್ ಕಾಲ್ ರಿಟ್ರೀಟ್ ಸೆಂಟರ್ನ ನಿರ್ದೇಶಕರಾದ ಫಾ. ಅಬ್ರಹಾಂ ಡಿಸೋಜ, ಫಾ. ಸುಶೀಲ್ ಖೆಸ್ ಮತ್ತು ಇತರರೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದರು.
ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ಎಲ್ಲಾ ವಲಸೆ ಸಮುದಾಯಗಳಿಗೆ ಮಾನ್ಯತೆ, ಗೌರವ ಮತ್ತು ಶ್ರದ್ಧೆಯನ್ನು ನೀಡುತ್ತದೆ.