ಕುಂದಾಪುರ, ಸೆ.27(DaijiworldNews/AA): ಎನ್ಎಂಓಪಿಎಸ್ನ ರಾಷ್ಟ್ರೀಯ ಕಾರ್ಯಕಾರಿಣೆ ನಿರ್ಧಾರದಂತೆ ಯುಪಿಎಸ್ ಅನ್ನು ಜಾರಿಗೆ ತರಲು ಉದ್ದೇಶಿಸಿರುವ ಕ್ರಮವನ್ನು ಹಿಂಪಡೆದು ಓಪಿಎಸ್ ಅನ್ನು ಜ್ಯಾರಿಗೊಳಿಸುವಂತೆ ಒತ್ತಾಯಿಸಿ ಕುಂದಾಪುರ ತಾಲ್ಲೂಕು ಎನ್ಪಿಎಸ್ ನೌಕರರ ಸಂಘ ಗುರುವಾರ ಕುಂದಾಪುರ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಶೋಭಾಕ್ಷ್ಮಿ ಅವರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭ ಮಾತನಾಡಿದ ಕುಂದಾಪುರ ತಾಲ್ಲೂಕು ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಅವರು, ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘವು ಕಳೆದ 10 ವರ್ಷಗಳಿಂದ ಹಳೆ ಪಿಂಚಣಿ ವ್ಯವಸ್ಥೆ ಮರು ಸ್ಥಾಪಿಸುವ ವಿಷಯದಲ್ಲಿ ನಿರಂತರ ಹೋರಾಟ ನಡೆಸುತ್ತಿದೆ. ಆದರೆ ಸೆಪ್ಟೆಂಬರ್ 19ರಂದು ನವದೆಹಲಿಯಲ್ಲಿ ನಡೆದ ಎನ್.ಎಂ.ಒ.ಪಿ.ಎಸ್.ನ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯಲ್ಲಿ ಕೇಂದ್ರ ಸರ್ಕಾರವು ಎನ್ಪಿಎಸ್ ಯೋಜನೆಯನ್ನು ಬದಲಾಯಿಸಿ ಏಕೀಕೃತ ಪಿಂಚಣಿ ಯೋಜನೆಯನ್ನು ಯುಪಿಎಸ್ ಜಾರಿಗೆ ತರಲು ತೀರ್ಮಾನಿಸಿದೆ. ಸದರಿ ಯೋಜನೆಯು ಸಹ ಬೇರು ಮಾರುಕಟ್ಟೆ ಆಧಾರಿತವಾಗಿದ್ದು ಸರ್ಕಾರಿ ನೌಕರರ ಸಂಧ್ಯಾಕಾಲದ ಬದುಕಿಗೆ ಯಾವುದೇ ಭದ್ರತೆಯನ್ನು ಒದಗಿಸುವ ಅಂಶಗಳನ್ನು ಹೊಂದಿಲ್ಲ. ಆದುದರಿಂದ ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಏಕೀಕೃತ ಪಿಂಚಣಿ ಪ್ರಮಸ್ಯೆಯನ್ನು ಹಿಂಪಡೆಯುವಂತೆ ಮತ್ತು ರಾಜ್ಯದಲ್ಲಿ ಎನ್ಪಿಎಸ್ ಯೋಜನೆಯನ್ನು ಪರಾಮರ್ಶಿಸಲು ರಚಿಸಿರುವ ಸಮಿತಿಯನ್ನು ಸಂಘವು ತೀವ್ರವಾಗಿ ವಿರೋಧಿಸುತ್ತದೆ. ಅಲ್ಲದೆ ಕಾಂಗ್ರೆಸ್ ಪಕ್ಷವು ಈಗಾಗಲೇ ನಮ್ಮ ಸಂಘಟನೆಗೆ ನೀಡಿರುವ ಭರವಸೆಯಂತೆ ರಾಜ್ಯದಲ್ಲಿ ಎನ್ಪಿಎಸ್ ರದ್ದುಗೊಳಿಸಿ ಓಪಿಎಸ್ ಅನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭ ಮಾತನಾಡಿದ ಎನ್ ಪಿಎಸ್ ಸದಸ್ಯೆ, ಓಪಿಎಸ್ ಬದಲು ಎನ್.ಪಿ.ಎಸ್ ಅನ್ನು ಅನುಷ್ಠಾನಕ್ಕೆ ತರದೆ ಇದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಯ ಕಾರ್ಯದರ್ಶಿ ಗಣೇಶ್ ಶೆಟ್ಟಿ ಮೊಳಹಳ್ಳಿ, ಉಪಾಧ್ಯಕ್ಷ ರಾಘವೇಂದ್ರ ಗುಲ್ವಾಡಿ, ಸುನೀತಾ ಬಾಂಜ್, ಕೋಶಾಧಿಕಾರಿ ರವಿ, ಸಹ ಕಾರ್ಯದರ್ಶಿ ಗುರುಮೂರ್ತಿ ಬಿ, ಅಶ್ವಿನಿ, ಸಂಘಟನಾ ಕಾರ್ಯದರ್ಶಿ ರಾಜೇಶ್, ಮಹಾರುದ್ರ ಮೊದಲಾದವರು ಇದ್ದರು.