ಮಂಗಳೂರು, ಸೆ.26(DaijiworldNews/AK): ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ಚಿಕಿತ್ಸಾಲಯಕ್ಕೆ ತೆರಳಿದ್ದ ಯುವಕನೋರ್ವ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಬೆಂದೋರ್ವೆಲ್ನಲ್ಲಿರುವ ಫ್ಲೌಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಕೂದಲು ಕಸಿ ಕ್ಲಿನಿಕ್ಗೆ ಆರೋಗ್ಯ ಇಲಾಖೆ ತಾತ್ಕಾಲಿಕವಾಗಿ ಬೀಗ ಜಡಿದಿದೆ.
ಉಳ್ಳಾಲ ಅಕ್ಕರೆಕೆರೆ ನಿವಾಸಿ ಮೊಹಮ್ಮದ್ ಮಝಿನ್ ಅವರು ಕಾಸ್ಮೆಟಿಕ್ ಸರ್ಜರಿಗಾಗಿ ಚಿಕಿತ್ಸಾಲಯಕ್ಕೆ ತೆರಳಿದ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಅವರು ಡಿಸಿ ಮುಲ್ಲೈ ಮುಗಿಲನ್ ಅವರ ನಿರ್ದೇಶನದಂತೆ ಚಿಕಿತ್ಸಾಲಯಕ್ಕೆ ಮೊಹರ್ ಹಾಕಿದರು.
ಮೃತ ಮೊಹಮ್ಮದ್ ಮಝಿನ್ಗೆ ಶಸ್ತ್ರಚಿಕಿತ್ಸೆಗೆ ಮುನ್ನ ಅನಸ್ತಾಸಿಯಾ ನೀಡಿದ ವೈದ್ಯರ ನಿರ್ಲಕ್ಷ್ಯ ಮತ್ತು ಅವರ ವರದಿಯು ವಿವಿಧ ಎಲೆಕ್ಟ್ರಾನಿಕ್, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಚಾಲ್ತಿಯಲ್ಲಿದೆ ಎಂದು ಮೃತ ಮೊಹಮ್ಮದ್ ಮಜಿನ್ ಅವರ ಕುಟುಂಬ ಸದಸ್ಯರು ಆರೋಪಿಸಿದ ನಂತರ ಆರೋಗ್ಯ ಇಲಾಖೆ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದೆ.