ಉಡುಪಿ, ಮೇ 31(Daijiworld News/MSP): ನಗರದ ಹೊರವಲಯದ ಮೂಡುಸಗ್ರಿ ಕುಂಡೆಲುಪಾದೆ ಎಂಬಲ್ಲಿ ಯುವಕನೊರ್ವನ ಶವವು ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿರುವ ಘಟನೆ ಮೇ 31 ರ ಶುಕ್ರವಾರ ನಡೆದಿದೆ.
ಯುವಕನು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ನಗರ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಮಣಿಪಾಲ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿದ್ದಾರೆ.
ಮೃತ ಯುವಕ ಮಣೋಳಿಗುಜ್ಜಿಯ ಅಜಯ್ ನಾಯಕ್ ಯಾನೆ ಗುಂಡು (32 ವ) ಎಂದು ಗುರುತಿಸಲಾಗಿದೆ. ಇತನು ಮಣಿಪಾಲ ಆಟೋ ಚಾಲಕನಾಗಿ ದುಡಿಯುತ್ತಿದನೆಂದು ತಿಳಿದು ಬಂದಿದೆ.