ದಾವಣಗೆರೆ, ನ 29 : ಮಕ್ಕಳ ಮನಸ್ಸಿನ ಮೇಲೆ ಯಾವುದೇ ವಿಚಾರಧಾರೆ ನೇರ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಇಲ್ಲಿದೆ ಜೀವಂತ ಉದಾಹರಣೆ. ಕಾರಣ ಧಾರವಾಹಿಯನ್ನು ನೋಡಿ 7 ವರ್ಷದ ಪುಟ್ಟ ಬಾಲೆ ಮೈಗೆ ಬೆಂಕಿ ಹಚ್ಚಿಕೊಂಡು ಮೃತಪಟ್ಟ ಘಟನೆ ದಾವಣಗೆರೆಯ ಹರಿಹರ ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ನಗರದ ನಿವಾಸಿಗಳಾದ ಚೈತ್ರಾ-ಮಂಜುನಾಥ್ ಪುತ್ರಿ, ಪ್ರಾರ್ಥನಾ (7) ಮೃತ ಬಾಲಕಿ . ಈಕೆ ಸ್ಥಳೀಯ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು. ಪ್ರಾರ್ಥನಾ ಪ್ರತಿದಿನ ಮಧ್ಯಾಹ್ನ ಮರುಪ್ರಸಾರ ಆಗುತ್ತಿದ್ದ ನಂದಿನಿ ಧಾರಾವಾಹಿಯನ್ನು ನೋಡುವುದನ್ನು ಅಭ್ಯಾಸಮಾಡಿಕೊಂಡಿದ್ದಳು. ದಿನನಿತ್ಯದಂತೆಯೇ ನ 11 ರಂದು ಅಜ್ಜಿ ಪ್ರಾರ್ಥನಾಳನ್ನು ಪ್ರತಿದಿನ ಶಾಲೆಯಿಂದ ಮನೆಗೆ ಬಿಟ್ಟು ಟಿವಿ ಆನ್ ಮಾಡಿ ಹೊರಗಡೆ ಹೋಗಿದ್ದಾರೆ. ನಂದಿನಿ ಧಾರಾವಾಹಿಯಲ್ಲಿ ನಾಯಕಿ ಕುಣಿಯುವುದನ್ನು ನೋಡಿ ಧಾರಾವಾಹಿಯಲ್ಲಿ ನಡೆದ ದೃಶ್ಯದಂತೆಯೇ ಪ್ರಾರ್ಥನಾ ಬೆಂಕಿ ಹಂಚಿಕೊಂಡಿದ್ದಾಳೆ. ಇದನ್ನು ನೋಡಿದ ತಂಗಿ ನೋಡಿ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾಳೆ. ತಕ್ಷಣ ಪ್ರಾರ್ಥನಾಳನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿದ್ದಾರೆ ಆದರೆ ನ 29 ರ ಬುಧವಾರ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಮಗುವನ್ನು ಕಳೆದುಕೊಂಡ ತಂದೆ-ತಾಯಿಗಳ ಅಕ್ರಂದನ ಮುಗಿಲು ಮುಟ್ಟಿದೆ. ಹೀಗಾಗಿ ಪೋಷಕರೇ ಬಿ ಆಲರ್ಟ್.