ಮಂಗಳೂರು, ಮೇ 29(Daijiworld News/MSP): ನಗರ ಪೊಲೀಸರು ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ವಯ ನಡೆಸುತ್ತಿರುವ ವಿಶೇಷ ಅಭಿಯಾ ಹಾಗೂ ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಬಿಗಿ ನಿಲುವಿನಿಂದ ಕಳೆದ ಒಂದು ವಾರದ ಅವಧಿಯಲ್ಲಿ ಖಾಸಗಿ ಕಟ್ಟಡಗಳ ಮಾಲೀಕರು 210 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಮೂಲಕ ನಗರದಲ್ಲಿ ಅಳವಡಿಕೆಯಾಗಿರುವ ಸಿಸಿಕೆಮರಾಗಳ ಸಂಖ್ಯೆ 1,830ಕ್ಕೆ ಏರಿಕೆಯಾಗಿದೆ.
ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ವಯ ಎಲ್ಲಾ ವಾಣಿಜ್ಯ ಸಂಕೀರ್ಣಗಳು, ಕಚೇರಿಗಳು, ಬೃಹತ್ ಮಳಿಗೆಗಳು, ಮಾಲ್ಗಳು, ಆಸ್ಪತ್ರೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳ ವ್ಯಾಪ್ತಿಗೆ ಸೇರುವ ಎಲ್ಲ ಕಟ್ಟಡಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯ. ಇದರಂತೆ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
ಕಾರ್ಯಾಚರಣೆ ಆರಂಭಿಸಿದ ಪ್ರಥಮ ವಾರದಲ್ಲೇ 210 ಸಿಸಿಟಿವಿ ಕ್ಯಾಮೆರಾಗಳನ್ನು ಕಟ್ಟಡಗಳ ಮಾಲೀಕರು ಅಳವಡಿಸಿಕೊಂಡಿದ್ದಾರೆ. ನಗರದಾದದ್ಯಂತ ಖಾಸಗಿಯವರಿಂದ 6,000 ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಗುರಿಯನ್ನು ಕಮಿಷನರ್ ಹೊಂದಿದ್ದಾರೆ.