ಮಂಗಳೂರು, ಸೆ.20 (DaijiworldNews/AK):ಬಿಎನ್ಐನ(ಬಿಜಿನೆಸ್ ನೆಟ್ವರ್ಕ್ ಇಂಟರ್ನ್ಯಾಶನಲ್) ಮಂಗಳೂರು ಮತ್ತು ಉಡುಪಿ ವತಿಯಿಂದ ನಗರದ ಡಾ. ಟಿಎಂಎಪೈ ಕನ್ವೆಶ್ಶನ್ ಸೆಂಟರ್ನಲ್ಲಿ ಶುಕ್ರವಾರದಿಂದ ಸೆ.23ರ ವರೆಗೆ ನಡೆಯಲಿರುವ ಬಿಎನ್ಐ ಬಿಗ್ ಬ್ರ್ಯಾಂಡ್ ಎಕ್ಸ್ಪೋ-2024 ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ ದೊರೆಯಿತು.
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಬಿಎನ್ಐ ಬಿಗ್ ಬ್ರ್ಯಾಂಡ್ ಎಕ್ಸ್ಪೋಗೆ ಚಾಲನೆ ನೀಡಿ ಮಾತನಾಡಿ, ಎಕ್ಸ್ಪೋದಂತಹ ಕಾರ್ಯಕ್ರಮದಿಂದ ಉದ್ದಿಮೆದಾರರಿಗೆ ಹಾಗೂ ಕಾರ್ಯಕ್ರಮ ಆಯೋಜಕರಿಗೆ ಮಾತ್ರ ಉಪಯೋಗವಲ್ಲ, ಇಡೀ ಊರಿಗೆ ಉಪಯೋಗವಾಗಲಿದ್ದು, ಒಂದೇ ಸ್ಥಳದಲ್ಲಿ ಹಲವು ಉದ್ದಿಮೆಗಳ ಪರಿಚಯ ಗ್ರಾಹಕರಿಗೆ ಆಗಲಿದೆ. ಬಿಎನ್ಐ ಬಿಗ್ ಬ್ರ್ಯಾಂಡ್ ಎಕ್ಸ್ಪೋನಿಂದ ಉದ್ದಿಮೆದಾರರ ಆದಾಯ ವೃದ್ದಿಯ ಜತೆಗೆ ಗ್ರಾಹಕರ ಹಾಗೂ ಜನರ ಆದಾಯವೂ ಹೆಚ್ಚಳವಾಗಲಿ. ಒಂದು ಪ್ರದೇಶ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ದಿಯಾಗಲು ಆರ್ಥಿಕ ಸಂಚಲನ ಮೂಲ ಕಾರಣ. ಆರ್ಥಿಕ ಚಲನವಲನ ಎಲ್ಲಿದೆಯೋ ಅಲ್ಲಿ ಆರ್ಥಿಕಾಭಿವೃದ್ದಿ ಸಾಧ್ಯ. ಈನಿಟ್ಟಿನಲ್ಲಿ ಬಿಎನ್ಐ ಬಿಗ್ ಬ್ರ್ಯಾಂಡ್ ಎಕ್ಸ್ಪೋ ಮೂಲಕ ಆರ್ಥಿಕ ಸಂಚಲನವಾಗಿ ಯಶಸ್ವಿ ಉದ್ಯಮಕ್ಕೆ ಉತ್ತಮ ದಾರಿಯಾಗಲಿ ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಕಳೆದ 3 ವರ್ಷಗಳಿಂದ ಮಂಗಳೂರಿನಲ್ಲಿ ಯೋಜನೆಗೊಳ್ಳುತ್ತಿರುವ ಬಿಗ್ ಬ್ರ್ಯಾಂಡ್ ಎಕ್ಸ್ಪೋ ಯಶಸ್ವಿಯಾಗಿ ನಡೆದು ಉದ್ಯಮಿಗಳಿಗೆ, ಗ್ರಾಹಕರಿಗೆ ಹಚ್ಚಿನ ಲಾಭವಾಗಲಿ. ಕಳೆದ 3 ವರ್ಷಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಬಿಎನ್ಐ ಪ್ರಪಂಚದ 79 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಕ್ಸ್ಪೋದ ಮೂಲಕ ಕರಾವಳಿಯಲ್ಲೂ 160 ಕೋ.ರೂಕ್ಕೂ ಅಧಿಕ ಆರ್ಥಿಕ ವ್ಯವಹಾರ ನಡೆದಿರುವುದು ಇದರ ಯಶಸ್ವಿಗೆ ಕಾರಣ ಎಂದರು.
ಬಿಎನ್ಐ ಸಂಸ್ಥೆಯ ಎಲ್ಲಾ ಸದಸ್ಯ ಸಂಸ್ಥೆಗಳ ಮಾಹಿತಿ, ಉದ್ದಿಮೆಯ ವಿಧಗಳನ್ನೊಳಗೊಂಡ ಮಾಹಿತಿ ಪುಸ್ತಕವನ್ನು ಶಾಸಕ ವೇದವ್ಯಾಸ ಕಾಮತ್ ಬಿಡುಗಡೆಗೊಳಿಸಿದರು.ಬಿಎನ್ಐ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್.ಎನ್.ಶರ್ಮ, ಬಿಗ್ ಬ್ರ್ಯಾಂಡ್ ಎಕ್ಸ್ಪೋ ಚೇರ್ಮೆನ್ ಮೋಹನ್ರಾಜ್, ಪ್ರೀತಿ ಶರ್ಮ, ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಶೆಟ್ಟಿ, ಬಿಎನ್ಐ ಸದಸ್ಯ ಮೋಹನ್ ಶೆಟ್ಟಿ, ಪ್ರಮುಖರಾದ ಸುನಿಲ್ ದತ್ತ್ ಪೈ, ಪ್ರಜ್ವಲ್ ಶೆಟ್ಟಿ , ಪ್ರಚಾರ ಸಮಿತಿ ಉಸ್ತುವಾರಿ ಡಾ. ಸಚಿನ್ ನಡ್ಕಸಹಿತ ಹಲವರು ಉಪಸ್ಥಿತರಿದ್ದರು.
ಬೃಹತ್ ಉದ್ದಿಮೆಗಳ ಪ್ರದರ್ಶನ
ಮೂರನೇ ವರ್ಷದ ಬಿಎನ್ಐ ಬಿಗ್ ಬ್ರ್ಯಾಂಡ್ ಎಕ್ಸ್ಪೋದಲ್ಲಿ ಸಂಸ್ಥೆಯ 120 ಸದಸ್ಯರು ತಮ್ಮ ಉದ್ದಿಮೆಗಳ ಪ್ರದರ್ಶನ ಏರ್ಪಡಿಸಿದ್ದಾರೆ. ಪ್ರದರ್ಶನ ಮೂರು ದಿನಗಳ ಕಾಲ ಬೆಳಗ್ಗೆ 10ರಿಂದ ರಾತ್ರಿ8ರವರೆಗೆ ನಡೆಯಲಿದೆ. ಪ್ರವೇಶ ಉಚಿತವಾಗಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳು, ಆಟೋಮೊಬೈಲ್, ಜುವೆಲ್ಲರಿ, ಎಚ್.ಆರ್., ಲೈಟಿಂಗ್ ಸೊಲ್ಯೂಷನ್, ಇನ್ಶೂರೆನ್ಸ್, ಗಾರ್ಮೆಂಟ್ಸ್, ಐ.ಟಿ. ಪ್ರಾಡಕ್ಟ್, ಸ್ಟಾವೇರ್, ಆಫೀಸ್ ಆ್ಯಂಡ್ ಹೋಂ ರ್ನೀಚರ್ಸ್, ುಡ್ ಪ್ರಾಡಕ್ಟ್ ಮುಂತಾದ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಪ್ರದರ್ಶನವಿದೆ . ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು, ಉತ್ತರ ಕೇರಳ, ಕೊಡಗು ಪ್ರದೇಶಗಳ ಜನ ಉತ್ತಮ ಗುಣಮಟ್ಟದ ಉತ್ಪನ್ನ, ಸೇವೆಗಳನ್ನು ಪಡೆಯಲು ಈ ಪ್ರದರ್ಶನ ಸಹಕಾರಿಯಾಗಲಿದೆ.
ಬಿಎನ್ಐ ಮಂಗಳೂರು ಜಗತ್ತಿನ ಉದ್ಯಮಿಗಳ ಮೆಚ್ಚುಗೆ ಪಡೆದ ಬಿಜಿನೆಸ್ ನೆಟ್ವರ್ಕ್ ಆಗಿರುವ ಬಿಎನ್ಐನ ಭಾಗವಾಗಿದ್ದು,ನೂರಕ್ಕೂ ಅಧಿಕ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 310ಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿದೆ. ಕಳೆದ ಬಾರಿ ಆಯೋಜಿಸಿದ್ದ ಎಕ್ಸ್ಪೋ ಭಾರಿ ಯಶಸ್ಸು ಗಳಿಸಿತ್ತು, ಈಬಾರಿಯೂ ಬಿಗ್ ಬ್ರ್ಯಾಂಡ್ ಎಕ್ಸ್ಪೋಗೆ ಉತ್ತಮ ಪ್ರತಿಕ್ರೀಯೆ ಲಭಿಸುತ್ತಿದೆ. ಗಣೇಶ್.ಎನ್.ಶರ್ಮ, ಕಾರ್ಯನಿರ್ವಾಹಕ ನಿರ್ದೇಶಕ, ಬಿಎನ್ಐ ಎಂಎನ್ಜಿ-20ಸೆ. ಬಿಎನ್ಐ
ಬಿಎನ್ಐ ಬಿಗ್ ಬ್ರ್ಯಾಂಡ್ ಎಕ್ಸ್ಪೋ-2024ಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ ನೀಡಿದರು. ಬಿಎನ್ಐ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್.ಎನ್.ಶರ್ಮ, ಶಾಸಕ ವೇದವ್ಯಾಸ ಕಾಮತ್, ಎಕ್ಸ್ಪೋ ಚೇರ್ಮೆನ್ ಮೋಹನ್ರಾಜ್ ಸಹಿತ ಹಲವರು ಉಪಸ್ಥಿತರಿದ್ದರು.