ಮಣಿಪಾಲ, ಸೆ.20 (DaijiworldNews/AK): ಶಿಕ್ಷಕರ ಸಬಲೀಕರಣ: ವಿದ್ಯಾರ್ಥಿ ಬೆಂಬಲಕ್ಕಾಗಿ ಕೌನ್ಸೆಲಿಂಗ್ ಕೌಶಲ್ಯಗಳ ಹೆಚ್ಚಳ ಕಾರ್ಯಾಗಾರ ಸರಣಿಯ ಮೂರನೇ ಆವೃತ್ತಿಯನ್ನು ಇಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ನಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.
ಸ್ಟೂಡೆಂಟ್ ಅಫೇರ್ ವಿಭಾಗ ಆಯೋಜಿಸಿರುವ ಈ ಎರಡು ದಿನಗಳ ಕಾರ್ಯಾಗಾರವು ವಿದ್ಯಾರ್ಥಿಗಳ ಮಾನಸಿಕ ಯೋಗಕ್ಷೇಮ ಮತ್ತು ಶೈಕ್ಷಣಿಕ ಯಶಸ್ಸನ್ನು ಸಾಧಿಸುವ ಮತ್ತು ಸುಧಾರಿತ ಕೌನ್ಸೆಲಿಂಗ್ ತಂತ್ರಗಳೊಂದಿಗೆ ಶಿಕ್ಷಕರನ್ನು ಸಜ್ಜುಗೊಳಿಸುವ ಉದ್ದೇಶ ಹೊಂದಿದೆ.
ಕಾರ್ಯಕ್ರಮವು ನಿಮ್ಹಾನ್ಸ್ನ ಮನೋವೈದ್ಯಕೀಯ ಸಾಮಾಜಿಕ ಕಾರ್ಯದ ಹೆಚ್ಚುವರಿ ಪ್ರಾಧ್ಯಾಪಕರಾದ ಡಾ. ಇ. ಅರವಿಂದ್ ರಾಜ್ ಅವರ ಮುಖ್ಯ ಭಾಷಣದೊಂದಿಗೆ ಪ್ರಾರಂಭವಾಯಿತು.ಅವರ ಸ್ಪೂರ್ತಿದಾಯಕ ಮತ್ತು ಚಿಂತನ-ಪ್ರಚೋದಕ ಒಳನೋಟಗಳು ಹಾಗೂ ಭಾವನಾತ್ಮಕ ಬೆಂಬಲ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದವು.
ಮಾಹೆಯ ಸ್ಟೂಡೆಂಟ್ ಅಫೇರ್ ವಿಭಾಗದ ನಿರ್ದೇಶಕಿ ಡಾ. ಗೀತಾ ಮಯ್ಯ ಅವರು ಅತಿಥಿಗಳನ್ನು ಮತ್ತು ಶಿಬಿರಾರ್ಥಿಗಳನ್ನು ಸ್ವಾಗಿಸಿ ಕಾರ್ಯಾಗಾರದ ಉದ್ದೇಶ ವಿವರಿಸಿದರು.ವಿದ್ಯಾರ್ಥಿಗಳಿಗೆ ಉತ್ತಮ ಬೆಂಬಲ ನೀಡಲು ಅಧ್ಯಾಪಕರ ಕೌನ್ಸಿಲಿಂಗ್ ಕೌಶಲ್ಯಗಳನ್ನು ಹೆಚ್ಚಿಸುವುದರಿಂದ ವಿದ್ಯಾರ್ಥಿಗಳಿಗೆ ಏನೆಲ್ಲ ಅನುಕೂಲವಾಗುತ್ತದೆ ಎಂಬುದನ್ನು ತಿಳಿಸಿಕೊಟ್ಟರು.
ಮಾಹೆಯ ಹಿರಿಯ ಸಲಹೆಗಾರರಾದ ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.
ಉಪನಿರ್ದೇಶಕರಾದ ಡಾ. ರೋಶನ್ ಡೇವಿಡ್ ಜತ್ತನ್ನ, ಡಾ. ರಶ್ಮಿ ಯೋಗೇಶ್ ಪೈ, ಮತ್ತು ಡಾ. ಅರವಿಂದ್ ಕುಮಾರ್ ಪಾಂಡೆ ಅವರು ಉಪಸ್ಥಿತರಿದ್ದರು. ಹಿರಿಯ ಆಪ್ತ ಸಲಹೆಗಾರರಾದ ಕರುಣಾ ದೇವಾಡಿಗ ನೇತೃತ್ವ ವಹಿಸಿದ್ದರು.