ಕಾಸರಗೋಡು, ಸೆ.18 (DaijiworldNews/ AK): ತಮಿಳುನಾಡಿನ ಕೊಯಮುತ್ತೂರುನಲ್ಲಿ ನಡೆದ ಅಪಘಾತದಲ್ಲಿ ಸೀತಾಂಗೋಳಿ ಕಟ್ಟತ್ತ ಡ್ಕ ನಿವಾಸಿಯಾದ ವೈದ್ಯಕೀಯ ವಿದ್ಯಾರ್ಥಿ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ .
ಕಟ್ಟತ್ತಡ್ಕ ಎಕೆಜಿ ನಗರದ ಮುಹಮ್ಮದ್ ರಾಶಿದ್ (20) ಮೃತ ಪಟ್ಟ ವಿದ್ಯಾರ್ಥಿ. ಕೊಯಮುತ್ತೂರುನಲ್ಲಿ ಎರಡನೇ ವರ್ಷದ ಎಂ ಬಿ ಬಿ ಎಸ್ ವಿದ್ಯಾರ್ಥಿ ಯಾಗಿದ್ದನು. ರಾತ್ರಿ ಎಂಟು ಗಂಟೆ ಸುಮಾರಿಗೆ ಆಹಾರ ಸೇವಿಸಲು ಹೋಟೆಲ್ ಗೆ ರಸ್ತೆ ದಾಟುತ್ತಿದ್ದಾಗ ಅತೀ ವೇಗದಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯ ಗೊಂಡ ರಾಶೀದ್ ನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಅಪಘಾತದ ಸುದ್ದಿ ತಿಳಿದು ಸಂಬಂಧಿಕರು ಕೊಯಮುತ್ತೂರಿಗೆ ತೆರಳಿದ್ದಾರೆ . ಗಲ್ಫ್ ನಲ್ಲಿರುವ ತಂದೆ ಅಹಮ್ಮದ್ ಊರಿಗೆ ಮರಳಿದ್ದಾರೆ. ರಜೆ ಯಲ್ಲಿ ಊರಿಗೆ ಬಂದಿದ್ದ ರಾಶಿದ್ ಒಂದು ವಾರ ದ ಹಿಂದೆ ಕೊಯಮುತ್ತೂರಿಗೆ ಮರಳಿದ್ದರು.