ಕಾರ್ಕಳ , ಸೆ.18 (DaijiworldNews/ AK): ಕುಕ್ಕುಂದೂರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪ್ರಭಾವತಿಯವರ ಅಮಾನತು ಆದೇಶವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿಂದಕ್ಕೆ ಪಡೆದಿದೆ. ಕುಕ್ಕುಂದೂರು ಗ್ರಾ.ಪಂ. ಅನುದಾನದಿಂದ ನಿರ್ಮಿಸಲಾಗಿರುವ ಹೆಚ್ಚುವರಿ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಸುನಿಲ್ ಕುಮಾರ್ ಅವರನ್ನು ಆಹ್ವಾನ ಮಾಡಲಿಲ್ಲ. ಇದರ ಬಗ್ಗೆ ಮಾಹಿತಿ ಕಲೆ ಹಾಕಿ ಸೆಪ್ಟೆಂಬರ್ 4ರಂದು ಇಲಾಖೆ ಅಮಾನತು ಮಾಡಿತ್ತು.
ಅಮಾನತು ಆದೇಶ ಬಳಿಕ ಪುನಃ ಈ ಬಗ್ಗೆ ಪರಿಶೀಲನೆ ಮಾಡಿದ ಬಳಿಕ ಇಂದು ಅವರನ್ನು ಮರಳಿ ಗೌರವ ಧನ ಸೇವೆಗೆ ತೆರಳಲು ಇಲಾಖೆ ಆದೇಶ ನೀಡಿದೆ.
ಅಮಾನತು ಹಿನ್ನಲ್ಲೆ:
ಕುಕ್ಕುಂದೂರು ಗ್ರಾ.ಪಂ. ಅನುದಾನದಿಂದ ನಿರ್ಮಿಸಲಾಗಿ ರುವ ಕೊಠಡಿಯ ಉದ್ಘಾಟನೆ ಅಂಗ ವಾಗಿ ಆ.28ರಂದು ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ವತಿಯಿಂದ ಏರ್ಪಡಿಸಿರುವ ಗಣ ಹೋಮ ಹಾಗೂ ಹೆಚ್ಚುವರಿ ಕೊಠಡಿ ಉದ್ಘಾಟನೆ ಮಾಹಿತಿಯನ್ನು ಇಲಾಖೆ ಅಥವಾ ಸ್ಥಳೀಯ ಶಾಸಕರ ಗಮನಕ್ಕೆ ತಂದಿರಲಿಲ್ಲ.
ಕಾರ್ಯಕ್ರಮ ನಡೆದಿರುವ ಬಗ್ಗೆ ಸ್ಥಳೀಯರಿಂದ ಇಲಾಖೆಗೆ ತಿಳಿದು ಬಂದಿದ್ದು, ಇದು ಶಿಷ್ಟಾಚಾರ ಉಲ್ಲಂಘನೆ ಆಗಿರುತ್ತದೆ. ಇದಕ್ಕೆ ಸಂಬಂಧಿಸಿ ಜಯಂತಿನಗರ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಂಬಂಧಪಟ್ಟ ವಲಯ ಮೇಲ್ವಿಚಾರಕಿಗೆ ಕಾರಣ ಕೇಳಿ ಇಲಾಖೆಯಿಂದ ನೋಟೀಸು ನೀಡಲಾಗಿತ್ತು.
ಅಂಗನವಾಡಿ ಕಾರ್ಯಕರ್ತೆ ಮತ್ತು ವಲಯ ಮೇಲ್ವಿಚಾರಕಿ ನೋಟಿಸಿಗೆ ಸಮಜಾಯಿಷಿ ನೀಡಿದ್ದರು. ಸದರಿ ಅಂಗನವಾಡಿ ಕಾರ್ಯಕರ್ತೆಯ ಕರ್ತವ್ಯ ಲೋಪದ ಕುರಿತು ಕೈಗೊಳ್ಳಲು ಅಂಗನವಾಡಿ ಕಾರ್ಯ ಕರ್ತೆ, ಸಹಾಯಕಿಯರ ಆಯ್ಕೆ ಸಮಿತಿ ಅಧ್ಯಕ್ಷೆ ಜಿಲ್ಲಾಧಿಕಾರಿ ಯವರು ಉಲ್ಲೇಖ (6)ರನ್ವಯ ಜಯಂತಿ ನಗರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪ್ರಭಾವತಿ ಯವ ರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದರು.
ರಾಜಕೀಯ ಮೇಲಾಟದಲ್ಲಿ ಅಮಾಯಾಕಿ ಬಲಿಪಶು!
ಆ.28ರಂದು ಅಂಗನವಾಡಿ ಹೆಚ್ಚುವರಿ ಕೊಠಡಿಯ ಉದ್ಘಾಟನ ಸಂದರ್ಭದಲ್ಲಿ ಗಣಹೋಮ ನಡೆದಿದ್ದು ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಭಾಗವಹಿಸಿದ್ದರೆಂಬ ಆರೋಪ ಬಿಜೆಪಿಯದಾಗಿತ್ತು.ಶಿಷ್ಟಾಚಾರದಂತೆ ಶಾಸಕರನ್ನು ಆಹ್ವಾನಿಸಿಲ್ಲ ಎಂಬ ಆರೋಪವು ಶಾಸಕ ಸುನೀಲ್ ಕುಮಾರ್ ಅವರದಾಗಿತ್ತು.
ಇಲಾಖೆಯ ಅನುಮತಿ ಇಲ್ಲದೇ ಅಲ್ಲಿ ನಡೆದಿತ್ತಾ ಗಣಹೋಮ ಇತ್ಯಾದಿ ವಿಚಾರಗಳು ಚರ್ಚೆಯಲ್ಲಿ ಇರುತ್ತಿದ್ದಂತೆ ಸೆ. 5 ಅಂದರೆ ಗೌರಿ ಹಬ್ಬದ ಮುನ್ನ ದಿನ ಸ್ತ್ರೀ ಯೊಬ್ಬರಿಗೆ ಅಮಾನತು ಅದೇಶ ಪತ್ರ ಕೈ ಸೇರಿದು ಮಾತ್ರ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಂತೆ ಯಾಗಿತ್ತು.
ಇದೇ ವಿಚಾರದಲ್ಲಿ ಬಿಜೆಪಿ- ಕಾಂಗ್ರೆಸ್ ಮುಖಂಡ ಆರೋಪ ಪ್ರತ್ಯಾರೋಪ ದ ನಡುವೆ ಇದೀಗ ಅಮಾನತು ಅದೇಶ ಹಿಂಪಡೆದ ನಿರ್ಧಾರವು ರಾಜಕೀಯ ವಲಯದಲ್ಲಿ ಹೊಸ ತಿರುವು ಪಡೆದಿರುವುದಂತು ಸತ್ಯ.