ಕುಂದಾಪುರ, ಸೆ.16(DaijiworldNews/AA): ಕಳೆದ ಆರು ವರ್ಷಗಳಿಂದ ಕಾರವಾರ ವಿಭಾಗೀಯ ವ್ಯವಸ್ಥಾಪಕರಾಗಿ ಜನಮೆಚ್ಚುಗೆ ಗಳಿಸಿ ಬಡ್ತಿ ಪಡೆದು ಮುಂಬಯಿಗೆ ವರ್ಗಾವಣೆಗೊಂಡ ಬಿ ಬಿ ನಿಕ್ಕಮ್ ರವರಿಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ಲಯನ್ಸ್ ಕ್ಲಬ್ ಹಂಗ್ಲೂರು ಸಹಯೋಗದೊಂದಿಗೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರ ಮೂಲಕ ಬೀಳ್ಕೊಡಲಾಯಿತು.
ಬಿಬಿ ನಿಕ್ಕಮ್ ಕೊಂಕಣ ರೈಲ್ವೆ ನಿಗಮವನ್ನು ಜನರ ಬಳಿ ತರಲು ನಡೆಸಿದ ಶ್ರಮ ಹಾಗು ಸಾರ್ವಜನಿಕರು ಮತ್ತು ರೈಲು ನಿಗಮದ ನಡುವೆ ಇದ್ದ ಅಂತರ ತಗ್ಗಿಸಲು ಕೈಗೊಂಡ ಕ್ರಮಗಳು, ಕತ್ತಲೆ ತುಂಬಿದ್ದ ನಿಲ್ದಾಣಕ್ಕೆ ಅಭಿವೃದ್ಧಿ ಕಾರ್ಯಗಳಾದ ಹೈಮಾಸ್ಡ್, ಟಿಕೆಟ್ ವ್ಯವಸ್ತೆ, ಪಂಚಗಂಗಾ ರೈಲಿನ ಸುಧಾರಣೆ, ಹೊಸ ಮೈಸೂರು ರೈಲು, ಹೊಸ ನಿಲುಗಡೆ ಇತ್ಯಾದಿ, ಪ್ರಿಪೈಡ್ ಕೌಂಟರ್ ಇತ್ಯಾದಿ ಅಭಿವ್ರದ್ದಿ ಚಟುವಟಿಕೆಗಳನ್ನು ಸ್ಮರಿಸಲಾಯಿತು.
ಇದೇ ಸಂದರ್ಭ, ಲಯನ್ಸ್ ಕ್ಲಬ್ ಹಂಗ್ಲೂರು ಪ್ರಾಯೋಜಕತ್ವದಲ್ಲಿ ಕುಂದಾಪುರ ನಿಲ್ದಾಣಕ್ಕೆ ಸುಮಾರು 40 ಲಕ್ಷ ರೂಪಾಯಿಗೂ ಅಧಿಕ ಉದ್ದೇಶಿತ ಪ್ಲಾಟ್ ಪಾರಂ ಪ್ಲೋರಿಂಗ್, ರೂಫಿಂಗ್ ಮತ್ತು ಶೌಚಾಲಯ ವಿನ್ಯಾಸವನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಬಿಡುಗಡೆ ಮಾಡಿದರು.ಇದೇ ಸಂಧರ್ಭದಲ್ಲಿ ಲಯನ್ಸ್ ಕ್ಲಬ್ ಹಂಗ್ಲೂರಿನ ಈ ಉದಾತ್ತವಾದ ಸಾರ್ವಜನಿಕರಿಗೆ ಅನುಕೂಲವಾಗುತ್ತಿರುವ ಕೊಡುಗೆಯನ್ನು ನೀಡಲು ಹೊರಟ ಲಯನ್ಸ್ ಕ್ಲಬ್ ಹಂಗಳೂರಿನ ಸರ್ವ ಸದಸ್ಯರನ್ನ ಮುಕ್ತ ಕಂಠದಿಂದ ಶ್ಲಾಘಿಸಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ರೈಲ್ವೇ ಅಧಿಕಾರಿಗಳಿಗೆ ಸಾರ್ವಜನಿಕ ಬೀಳ್ಕೊಡುಗೆ ತೀರಾ ಅಪರೂಪವಾಗಿದ್ದು ಜನರ ಪ್ರೀತಿ, ವಿಶ್ವಾಸ ಸಂಪಾದಿಸಿದ ಅಧಿಕಾರಿಗಳಿಗೆ ಮಾತ್ರ ಇದು ಲಭ್ಯವಾಗುತ್ತದೆ ಎಂದರು.
ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಮಾತನಾಡಿ, ಪದನ್ನೊತಿ ಹೊಂದಿದ ಬಿಬಿ ನಿಕ್ಕಮ್ ಅವರಿಂದ ಕರಾವಳಿಗೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸಹಕಾರ ಸಿಗಲಿ ಆಶಾ ಭಾವನೆ ಎಂದರು. ಲಯನ್ಸ್ ಕ್ಲಬ್ ಪರವಾಗಿ ಲಯನ್ಸ್ ವಲಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಲಯನ್ಸ್ ಕ್ಲಬ್ ಗೆ ಇಂಥಾ ಉನ್ನತ ಕಾರ್ಯ ಮಾಡಲು ಅವಕಾಶ ಲಭಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು.
ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ತನ್ ಸ್ವಾಗತಿಸಿ ಪ್ರಾಸ್ತಾವಿಸಿದರು. ಸಮಿತಿ ಸಂಚಾಲಕ ವಿವೇಕ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ತಾಂತ್ರಿಕ ಸಲಹೆಗಾರ ಗೌತಮ್ ಶೆಟ್ಟಿ ಬಿಬಿ ನಿಕ್ಕಮ್ ಅವರನ್ನ ಸಭೆಗೆ ಪರಿಚಯಿಸಿದರು. ಕಾರ್ಯದರ್ಶಿ ಪ್ರವೀಣ್ ಟಿ ವಂದಿಸಿದರು.
ಲಯನ್ಸ್ ಹಂಗ್ಲೂರು ಅಧ್ಯಕ್ಷ ರೋವನ್ ಡಿ ಕೋಸ್ಟಾ, ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ, ಕೋಶಾಧಿಕಾರಿ ಪುನೀತ್ , ಲಯನ್ಸ್ ಕ್ಲಬ್ ಹಂಗ್ಲೂರು, ಕುಂದಾಪುರ ಅಮೃತಧಾರಾ, ಕೋಟೇಶ್ವರ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ರೆಡ್ ಕ್ರಾಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.